• 24 March 2019 13:13
Jai Kannada
Jai Kannada
Blog single photo
August 26, 2018

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರ 

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ಆಚೆ ಇರುವ ಜಿಲ್ಲೆಗಳ  ನಡುವೆ ಏಕಮಾತ್ರ ರಸ್ತೆ ಸಂಪರ್ಕವಾಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಯಾವುದೇ ಅಡೆತಡೆಯಿಲ್ಲದೇ ಸುಗಮವಾಗಿ ಸಾಗುತ್ತಿದೆ. ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಅವುಗಳ ಸಂಚಾರ ನಿಧಾನವಾಗಿದ್ದು, ಮಳೆಯ ಪ್ರಕೋಪ ತಗ್ಗಿರುವುದರಿಂದ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ.

ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿದಿದ್ದರಿಂದ ಚಾರ್ಮಾಡಿ ಘಾಟಿ ರಸ್ತೆಯನ್ನು ಕೂಡ ಸಂಚಾರಕ್ಕೆ ಬಂದ್ ಮಾಡಲಾಗುತ್ತದೆಂಬ ಶಂಕೆ ಉಂಟಾಗಿತ್ತು.  ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಭೂಕುಸಿತದ ಭಯವೂ ಇದೆ. ಆದರೆ ಮಳೆಯ ಪ್ರಮಾಣ ತಗ್ಗುತ್ತಿದ್ದಂತೆ ಭೂಕುಸಿತದ ಅಪಾಯವೂ ಕಮ್ಮಿಯಾಗಿದೆ. ಭೂಕುಸಿತದ ಭಯದಿಂದಾಗಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತಗಳು ಈ ಘಾಟಿ ರಸ್ತೆಯಲ್ಲಿ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು.

ಈ ಘಾಟಿ ರಸ್ತೆಯಲ್ಲಿ ಮುಖ್ಯ ಸಮಸ್ಯೆಯೇನೆಂದರೆ ಹಳ್ಳಗಳು ಮತ್ತು ಕಂದಕಗಳು ರಸ್ತೆಯಲ್ಲಿ ಉಂಟಾಗಿರುವುದು. ದುರಸ್ತಿ ಬಳಿಕವೂ ಈ ಹಳ್ಳಗಳು ಮತ್ತೆ ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಶಿರ್ಡಿ ಘಾಟಿ ರಸ್ತಯಲ್ಲಿ ಅನಿರ್ದಿಷ್ಟಾವಧಿಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

Recent Comments

Leave Comments

footer
Top