• 15 December 2018 22:02
Jai Kannada
Jai Kannada
Blog single photo
August 24, 2018

ಕೊಡಗಿನ ರಸ್ತೆಗಳ ಮರುನಿರ್ಮಾಣಕ್ಕೆ ಸೇನೆ ನೆರವು: ರಕ್ಷಣಾ ಸಚಿವೆ ಭರವಸೆ 

ಮಡಿಕೇರಿ: ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಭೇಟಿ ನೀಡಿದ್ದು, ವಿನಾಶಗೊಂಡ ಕೊಡಗಿನ ರಸ್ತೆಗಳ ಮರುನಿರ್ಮಾಣಕ್ಕೆ ಭಾರತ ಸೇನೆಯು ನೆರವು ನೀಡುತ್ತದೆಂದು ಜನರಿಗೆ ಭರವಸೆ ನೀಡಿದ್ದಾರೆ.
ಭಾರತ ಸೇನೆಯ ಗಡಿ ರಸ್ತೆ ಸಂಘಟನೆ(ಬಿಆರ್‌ಒ) ಸಲಹೆಗಾರರಾಗಿ ಭೇಟಿ ನೀಡಿ ಗುಡ್ಡ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸುವುದು ಹೇಗೆಂದು ಸಲಹೆ ನೀಡುತ್ತಾರೆಂದು ಸೀತಾರಾಮನ್ ಮಡಿಕೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರೀ ಮಳೆ ಮತ್ತು ಭೂಕುಸಿತಗಳಿಂದ, ಜಿಲ್ಲೆಯ ಅನೇಕ ರಸ್ತೆಗಳು ಹಾಳಾಗಿದ್ದು, ಅನೇಕ ಗ್ರಾಮಗಳು ಮತ್ತು ಪಟ್ಟಣಗಳಿಗೆ ಸಂಪರ್ಕ ತಪ್ಪಿಹೋಗಿದೆ.

ರಕ್ಷಣಾ ಸಚಿವರು ಭಾರೀ ಮಳೆ ಮತ್ತು ದಿಢೀರ್ ಪ್ರವಾಹದಿಂದ ತೀವ್ರವಾಗಿ ಹಾನಿಗೊಂಡ ಕುಶಾಲ್ ನಗರ ಮತ್ತು ಮಾದಾಪುರಕ್ಕೆ ಭೇಟಿ ನೀಡಿದರು. ಮಡಿಕೇರಿಯ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದ ಪ್ರವಾಹಪೀಡಿತರ ಜತೆ ಸಚಿವರು ಯೋಗಕ್ಷೇಮ ವಿಚಾರಿಸಿದರು.
ಆರಂಭಿಕ ಅಂದಾಜಿನ ಪ್ರಕಾರ ಭೀಕರ ಪ್ರವಾಹ ಮತ್ತು ಮಳೆಗೆ ತುತ್ತಾದ ಕೊಡಗಿನಲ್ಲಿ 1140 ಕೋಟಿ ರೂ.ಮೌಲ್ಯದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ನಾಶವಾಗಿವೆ ಎಂದು ಕೊಡಗು ಉಪಆಯುಕ್ತೆ ಶ್ರೀವಿದ್ಯಾ ತಿಳಿಸಿದ್ದಾರೆ.

 ಸುಮಾರು 5000 ಮಂದಿ ಜಿಲ್ಲೆಯ 51 ಪರಿಹಾರ ಶಿಬಿರಗಳಲ್ಲಿ ಸದ್ಯಕ್ಕೆ ಆಶ್ರಯ ಪಡೆದಿದ್ದು, ಪ್ರವಾಹಗಳು ಮತ್ತು ಭೂಕುಸಿತಗಳಿಂದ 1100ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. 

Recent Comments

Leave Comments

footer
Top