• 19 November 2018 15:26
Jai Kannada
Jai Kannada
Blog single photo
August 08, 2018

ಡೆತ್‌ನೋಟ್‌ನಲ್ಲಿ ಸೌದಿ ಪ್ರಜೆಯ ಕಿರುಕುಳದ ಬಗ್ಗೆ ಬರೆದಿದ್ದ ನರ್ಸ್ ಹೇಜಲ್ 

ಉಡುಪಿ: ಶಿರ್ವ ಮೂಲದ ನರ್ಸ್ ಹೇಜಲ್ ಜ್ಯೋತ್ಸ್ನಾ ಮ್ಯಾಥಿಯಾಸ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ.  ಹೇಜಲ್ ಅವರು ಜುಲೈ 19ರಂದು ಸೌದಿಯ ಅಲ್ ಮಿಖಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸೌದಿ ಪೊಲೀಸರು ಎಲ್ಲಾ ಪುರಾವೆಗಳನ್ನು ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿದ್ದು, ನರ್ಸ್ ಸಾವಿಗೆ ಸಂಬಂಧಿಸಿದಂತೆ ಸೌದಿಯ ಪ್ರಜೆಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೇಜಲ್ ಇಂಗ್ಲೀಷ್ ಮತ್ತು ಕೊಂಕಣಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು ಸೌದಿಯ ಪ್ರಜೆಯೊಬ್ಬ ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಬರೆದಿದ್ದಳು.

ಪೊಲೀಸರು ಹೇಜಲ್ ಪತ್ರವನ್ನು ಮೊಹರಾದ ಲಕೋಟೆಯಲ್ಲಿರಿಸಿದ್ದು, ಈ ಪತ್ರ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ದುಷ್ಕರ್ಮಿಯನ್ನು ಬಂಧಿಸಿದರು.

ಆದರೆ ಹೇಜಲ್ ದೇಹವನ್ನು ಭಾರತಕ್ಕೆ ತರುವ ಸಾಧ್ಯತೆ ಕ್ಷೀಣಿಸಿದ್ದು,ಪೊಲೀಸರು ತಮ್ಮ ತನಿಖೆ ನಡೆಸಬೇಕಿದ್ದು, ವರದಿ ಸಲ್ಲಿಸಿದ ಮೇಲೆ ಕೋರ್ಟ್ ಅಂತಿಮ ತೀರ್ಪು ನೀಡಬೇಕಾಗಿದೆ.
 

Recent Comments

Leave Comments

footer
Top