ಕುಂದಾಪುರ: ವಿದ್ಯಾರ್ಥಿಗಳಿಗೆ ಸೆಲ್ಫೋನ್ ಕುರಿತು ಎಷ್ಟೊಂದು ಗೀಳು ಅಂಟಿಕೊಂಡಿದೆಯೆಂದರೆ ಅದಿಲ್ಲದಿದ್ದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅದನ್ನೇ ತಮ್ಮ ಜೀವನ ಎಂದು ಭಾವಿಸುವವರು ಇದ್ದಾರೆ. ಆದರೆ ಸೆಲ್ ಫೋನ್ ತಂದೆ, ತಾಯಿ ಕೊಡಿಸಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ವಿದ್ಯಾರ್ಥಿಗಳು ಇಳಿಯುತ್ತಿದ್ದಾರೆಯೇ?
ಕಳೆದ ಆಗಸ್ಟ್ 3ರಂದು ಬಿದ್ಕಲ್ಕಟ್ಟೆ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತೀಕ್ಷ್(16) ಎಂಬವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ತಂದೆ, ತಾಯಿಗಳು ತನಗೆ ಸೆಲ್ ಫೋನ್ ಕೊಡಿಸಲಿಲ್ಲವೆಂದು ಪ್ರತೀಕ್ಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರತೀಕ್ಷ್ ಬಡ ಕುಟುಂಬಕ್ಕೆ ಸೇರಿದವ. ಕಾಲೇಜಿನ ಇತರೆ ವಿದ್ಯಾರ್ಥಿಗಳು ಸೆಲ್ ಫೋನ್ ಬಳಸುವುದನ್ನು ಕಂಡು ತನ್ನದೇ ಸೆಲ್ ಫೋನ್ ಹೊಂದಬೇಕೆಂದು ಪ್ರತೀಕ್ಷ್ ಬಯಸಿದ. ಆದರೆ ಅವನ ಬೇಡಿಕೆ ಈಡೇರಿಸಲು ಕುಟುಂಬ ನಿರಾಕರಿಸಿದ್ದರಿಂದ ತೀವ್ರ ಮನನೊಂದಿದ್ದ ಪ್ರತೀಕ್ಷ್ ಕುಟುಂಬದ ಎಲ್ಲರೂ ಹೊರಕ್ಕೆ ಹೋಗಿದ್ದಾಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
Recent Comments