• 19 August 2018 23:08
Jai Kannada
Jai Kannada
Blog single photo
August 01, 2018

ಟೈರ್ ಸ್ಫೋಟಗೊಂಡು ಕಾರಿಗೆ ಡಿಕ್ಕಿ ಹೊಡೆದ ಬಸ್: ಪ್ರಯಾಣಿಕರಿಗೆ ಗಾಯ 

..ಮಂಗಳೂರು: ಖಾಸಗಿ ಬಸ್ಸಿನ ಟೈರ್ ಸ್ಫೋಟಗೊಂಡು ಕಾರೊಂದಕ್ಕೆ ಡಿಕ್ಕಿಹೊಡೆದು ಪಲ್ಟಿಯಾದ ಘಟನೆ ಮಂಗಳೂರಿನ ಅಡ್ಯಾರ್ ಬಳಿ ಬುಧವಾರ ಸಂಭವಿಸಿದೆ. ಖಾಸಗಿ ಬಸ್ ಪುತ್ತೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು

ಬಸ್ ವೇಗ ಪಡೆದುಕೊಳ್ಳುತ್ತಿದ್ದಂತೆ ಅದರ ಟೈರ್ ಸ್ಫೋಟಿಸಿದಾಗ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರೊಂದಕ್ಕೆ ಬಸ್ ಡಿಕ್ಕಿ ಹೊಡೆದ ನಂತರ ಪಲ್ಟಿಯಾಯಿತು.

 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಡ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Recent Comments

Leave Comments

footer
Top