• 25 April 2019 01:28
Jai Kannada
Jai Kannada
Blog single photo
July 30, 2018

ಪಾಕ್ ಕಾಲುಕೆರೆದು ಜಗಳಕ್ಕಿಳಿದರೂ ಶಾಂತಿ ಮಂತ್ರ ಬಯಸಿದ ಮೋದಿ 

ನವದೆಹಲಿ: ಪಾಕಿಸ್ತಾನ ಭಾರತದ ವಿರುದ್ಧ ಸದಾ ಕಾಲುಕೆರೆದುಕೊಂಡು ಜಗಳ ತೆಗೆಯುತ್ತದೆ. ಪಾಕಿಸ್ತಾನ ಮಾತಿನಲ್ಲಿ ಶಾಂತಿಯ ಮಂತ್ರ ಉದುರಿಸಿದರೂ ಹಿಂದಿನಿಂದ ಅಶಾಂತಿಯ ಕಿಡಿ ಹೊತ್ತಿಸಿ ಒಳಒಳಗೊಳಗೆ ಖುಷಿ ಪಡುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಜತೆ ಸಂಘರ್ಷದ ಭಾವನೆ ಇಟ್ಟುಕೊಳ್ಳದೇ  ಸ್ನೇಹ ಹಸ್ತ ಚಾಚಿದ್ದಾರೆ.

ಇಮ್ರಾನ್ ಖಾನ್ ಅವರ ತೆಹ್ರೀಕ್ ಇ ಇನ್ಸಾಫ್ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ ಬಳಿಕ ಮೋದಿ ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದರು.

ಇಮ್ರಾನ್ ಖಾನ್ ಅವರು ಆಗಸ್ಟ್ 11ರಂದು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಅವರ ಪಕ್ಷ ಬಹುಮತ ಸಾಧಿಸಲು ಇನ್ನೂ ತಿಣುಕಾಡುತ್ತಿದೆ. ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ್ದರಿಂದ ಪ್ರಧಾನಿ ಮೋದಿ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ ಅಭಿನಂದಿಸಿದರು.

ಭಾರತ ಉಪಖಂಡದಲ್ಲಿ ಶಾಶ್ವತ ಶಾಂತಿ ಬಯಸಿರುವ ಮೋದಿ ಈ ಕುರಿತು ತಮ್ಮ ಬದ್ಧತೆಯನ್ನು ಮತ್ತು ಇಚ್ಛೆಯನ್ನು ಇಮ್ರಾನ್ ಜತೆ ಮಾತುಕತೆಯಲ್ಲಿ ವ್ಯಕ್ತಪಡಿಸಿದರು.

ಇದಕ್ಕೆ ಮುಂಚೆ ಪ್ರಧಾನಿ ಮೋದಿ ನೇರವಾಗಿ ಮತ್ತು ಪರೋಕ್ಷವಾಗಿ ಪಾಕ್ ವಿರುದ್ಧ ವಾಗ್ದಾಳಿ ಮಾಡಿ ಭಾರತಕ್ಕೆ ನೋವುಂಟು ಮಾಡುವ ಶಕ್ತಿಗಳನ್ನು ಸಾಕುತ್ತಿದ್ದಾರೆಂದು ಪಾಕಿಸ್ತಾನವನ್ನು ಟೀಕಿಸಿದ್ದರು. ಪ್ರಚಾರದ ಸಂದರ್ಭದಲ್ಲಿ ಇಮ್ರಾನ್ ಖಾನ್ ಕೂಡ ಭಾರತದ ವಿರುದ್ಧ ವಿಷ ಕಾರಿದ್ದರು. ಮೋದಿ ಭಾರತ ಮತ್ತು ಪಾಕಿಸ್ತಾನಕ್ಕೆ ಎರಡಕ್ಕೂ ನಿರಾಶೆ ಉಂಟುಮಾಡಿದ್ದಾರೆಂದು ಟೀಕಿಸಿದ್ದರು.

 ಭದ್ರತಾ ವಿಶ್ಲೇಷಕರು ಭಾರತ-ಪಾಕ್ ಸಂಬಂಧ ಸುಧಾರಿಸುವ ಬಗ್ಗೆ ಆಶಾಭಾವನೆ ಇಟ್ಟುಕೊಂಡಿಲ್ಲ. ಏಕೆಂದರೆ ಇಮ್ರಾನ್ ಅವರಿಗೆ ಪಾಕಿಸ್ತಾನ ಸೇನೆಯ ಬೆಂಬಲ ಮತ್ತು ಆಶೀರ್ವಾದ ಇದೆಯೆಂದು ವ್ಯಾಪಕವಾಗಿ ಶಂಕಿಸಲಾಗಿದೆ.

Recent Comments

Leave Comments

footer
Top