• 17 December 2018 14:08
Jai Kannada
Jai Kannada
Blog single photo
July 29, 2018

ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮೇಲೆ ಮಾರಣಾಂತಿಕ ಹಲ್ಲೆ 

ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದ ಚೋಪ್ರಾ ಹತ್ಯೆಗೆ ವಿಫಲ ಯತ್ನ ನಡೆಸಲಾಗಿದೆ. ನಿನ್ನೆ ರಾತ್ರಿ ಬೆಳಗಾವಿಯ  ಸವದತ್ತಿಯಲ್ಲಿ ರಸ್ತೆಯೊಂದರಲ್ಲಿ  ವಿದ್ಯುತ್ ಕಡಿತಗೊಳಿಸಿ ಮಾರಕಾಸ್ತ್ರಗಳಿಂದ ಚೋಪ್ರಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಯಾರೋ ಅಪರಿಚಿತರು ಪ್ಲಾನ್ ಮಾಡಿ ಚೋಪ್ರಾ ಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರ ಆಪ್ತರಾದ ವಿಶ್ವನಾಥ್, ಆಅಸೀಫ್ ಹೇಳಿದ್ದಾರೆ. ಚೋಪ್ರಾ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲ್ಲೆಯಿಂದ ಚೋಪ್ರಾ ಅವರ ಕುತ್ತಿಗೆ, ತೋಳಿಗೆ ತೀವ್ರಗಾಯಗಳಾಗಿವೆ. ಆನಂದ ಚೋಪ್ರಾ ಅವರು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 5000 ಮತಗಳ ಅಂತರದಿಂದ ಸೋತಿದ್ದರು.

Recent Comments

Leave Comments

footer
Top