• 16 October 2018 09:23
Jai Kannada
Jai Kannada
Blog single photo
July 28, 2018

ಬೋಸ್ಟನ್‌ನಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಯಕ್ಷಗಾನ

ಬೋಸ್ಟನ್: ಕಲಾ ತರಂಗಿಣಿ ಬೋಸ್ಟನ್, ನ್ಯೂ ಇಂಗ್ಲೆಂಡ್ ತುಳುಕೂಟ ಬೋಸ್ಟನ್, ನ್ಯೂಇಂಗ್ಲೆಂಡ್ ಕನ್ನಡ ಕೂಟ ಬೋಸ್ಟನ್ ಮತ್ತು ಯಕ್ಷಲೋಕ ಬೋಸ್ಟನ್ ಜತೆಯಾಗಿ ಬೋಸ್ಟನ್ ಹಾಲಿಸ್ಟನ್ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ ಯಕ್ಷಗಾನವನ್ನು ಪ್ರೇಕ್ಷಕರು ಮಂತ್ರಮುಗ್ಧರಾಗಿ ವೀಕ್ಷಿಸಿದರು.

ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಕ್ಷೇತ್ರ ಕಟೀಲು ಮೇಳ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಕಲಾವಿದರು ಪ್ರದ
ರ್ಶಿಸಿದ ಮಹಿಷ ವಧೆ-ದೇವಿ ಮಹಾತ್ಮೆ ಪ್ರೇಕ್ಷಕರನ್ನು ಯಕ್ಷ, ಕಿನ್ನರ ಮತ್ತು ಕಿಂಪುರುಷ ಲೋಕಕ್ಕೆ ಒಯ್ದಿತು.

ಪಾಟ್ಲಾ ಸತೀಶ್ ಶೆಟ್ಟಿ ಅವರ ಮಧುರ ಧ್ವನಿ ಪ್ರೇಕ್ಷಕರನ್ನು ಮೋಡಿ ಮಾಡಿತು ಮತ್ತು ಪ್ರತಿಯೊಬ್ಬ ಕಲಾವಿದನ ನಟನೆ ಪ್ರೇಕ್ಷಕರು ಇಡೀ ಕಾರ್ಯಕ್ರಮದುದ್ದರೂ ತಮ್ಮ ಸೀಟು ಬಿಟ್ಟು ಕದಲದಂತೆ ಮಾಡಿತು.

Recent Comments

Leave Comments

footer
Top