• 17 February 2019 13:38
Jai Kannada
Jai Kannada
Blog single photo
July 28, 2018

ಹತ್ಯೆ ಆರೋಪಿ ನರೇಶ್ ಶೆಣೈ ಜಾಮೀನು ರದ್ದಿಗೆ ಕೋರಿಕೆ

ಮಂಗಳೂರು: ಹತ್ಯೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಸಹೋದರಿ ಅನುರಾಧ ಬಾಳಿಗಾ ಹೈಕೋರ್ಟ್ ಸಂಪರ್ಕಿಸಿ, ಪ್ರಕರಣದ ಆರೋಪಿಯಾದ ನರೇಶ್ ಶಣೈಗೆ ನೀಡಿದ ಜಾಮೀನನ್ನು ರದ್ದುಮಾಡುವಂತೆ ಕೋರಿದ್ದಾರೆ.

ಜಿಲ್ಲಾ ಮುಖ್ಯ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಜಾ ಆಗಿದ್ದರಿಂದ ಅನುರಾಧಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಪೀಠವು ನರೇಶ್ ಶಣೈ ಮತ್ತು ಬಾರ್ಕೆ ನಿಲ್ದಾಣದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಕಳಿಸಿದೆ. ವಿನಾಯಕ ಬಾಳಿಗ ಅವರನ್ನು 2016ರ ಮಾರ್ಚ್ 21ರಂದು ದೊಂಗರಕೇರಿ ಬಳಿಯಿರುವ ಅವರ ಮನೆಯ ಬಳಿ ಮಾರಕಾಸ್ತ್ರಗಳಿಂದ ತಿವಿದು ಹತ್ಯೆ ಮಾಡಲಾಗಿತ್ತು.

ಬಳಿಕ ಪೊಲೀಸರು ಆರೋಪಿ ನರೇಶ್ ಶಣೈ ಅವರನ್ನು ಬಂಧಿಸಿತ್ತು. ಶಣೈ ಹೈಕೋರ್ಟ್‌ನಿಂದ ಷರತ್ತಿನ ಜಾಮೀನು ಪಡೆದಿದ್ದರು. ಶೆಣೈ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದ ಅನುರಾಧಾ ಅವನ ಜಾಮೀನು ರದ್ದುಮಾಡುವಂತೆ ಕೋರಿದ್ದರು.

.

Recent Comments

Leave Comments

footer
Top