• 24 October 2018 09:10
Jai Kannada
Jai Kannada
Blog single photo
July 27, 2018

ಪಾಕ್ ಕ್ಯಾಪ್ಟನ್ ಆಗುವ ನಿರೀಕ್ಷೆಯಲ್ಲಿ ಕ್ರಿಕೆಟ್ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ 

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಧಿಕಾರಕ್ಕಾಗಿ ಸಮರ ಅಂತಿಮ  ಹಂತಗಳನ್ನು ಪ್ರವೇಶಿಸಿದ್ದು,  ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ -ಇ-ಇನ್ಸಾಫ್ 110 ಸೀಟುಗಳನ್ನು ಗೆದ್ದಿದೆ. ಇನ್ನೂ 19 ಸೀಟುಗಳ ಫಲಿತಾಂಶ ಬರಬೇಕಿದೆ. ಜೈಲಿನಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ 63 ಸ್ಥಾನಗಳನ್ನು ಗೆದ್ದಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೂರನೇ ಸ್ಥಾನ ಗಳಿಸಿದ್ದು, 42 ಸೀಟುಗಳನ್ನು ಗೆದ್ದಿದೆ.

ಇಮ್ರಾನ್ ಖಾನ್ ಮುನ್ನಡೆಯಲ್ಲಿದ್ದಾರೆಂದು ಮೂರು ಟಿವಿ ಕ್ಯಾಮರಾಗಳು ಪ್ರಕಟಿಸಿದ್ದು, ಅವರು ಜಯಶಾಲಿಯಾಗುವ ನಿರೀಕ್ಷೆಯಲ್ಲಿ ಇಮ್ರಾನ್ ಶಿಬಿರದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.

ಏತನ್ಮಧ್ಯೆ, ಚುನಾವಣೆಯಲ್ಲಿ ಮತಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪಿಎಂಎ-ಎನ್ ಮತ್ತು ಪಿಪಿಸಿ ಆರೋಪಿಸಿದೆ.
ಇಮ್ರಾನ್ ಖಾನ್ ಇಸ್ಲಾಮಾದ್ ಸೀಟನ್ನು 92,981 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದು, ಮಾಜಿ ಪ್ರಧಾನಿ ಶಾಹಿದ್ ಖಾಕಾನ್ ಅಬ್ಬಾಸಿಯನ್ನು ಸೋಲಿಸಿದ್ದಾರೆ.
 

Recent Comments

Leave Comments

footer
Top