• 19 August 2018 23:09
Jai Kannada
Jai Kannada
Blog single photo
July 26, 2018

ಜುಲೈ 27ರಂದು ರಕ್ತಚಂದ್ರಗ್ರಹಣದಿಂದ ಪ್ರಳಯದ ಭೀತಿಯೇ?

ಬೆಂಗಳೂರು: ಜುಲೈ 27 ರಂದು ಸೌರಮಂಡಲದಲ್ಲಿ ಎರಡು ಕೌತುಕಗಳು ಸಂಭವಿಸಲಿದೆ. ಸುದೀರ್ಘ ರಕ್ತಚಂದ್ರಗ್ರಹಣ ಮತ್ತು ಮಂಗಳ ಗ್ರಹದ ದರ್ಶನ ಎರಡೂ ಒಟ್ಟೊಟ್ಟಿಗೆ ಸಂಭವಿಸಲಿದೆ.  ಖಗೋಳದಲ್ಲಿ ರಕ್ತಚಂದಿರ ಅತೀ ಪ್ರಕಾಶಮಾನವಾಗಿ ಜುಲೈ 27ರ ಮಧ್ಯರಾತ್ರಿ ಕಾಣಿಸಲಿದೆ. ಈ ಚಂದ್ರಗ್ರಹಣವು ಅತೀ ದೀರ್ಘ ಸಂಪೂರ್ಣವಾಗಿ ರಕ್ತವರ್ಣದಲ್ಲಿ ಗೋಚರಿಸಲಿದ್ದಾನೆ.

 ಜುಲೈ 27ರಂದು ರಾತ್ರಿ ಕಾಣಿಸುವ ಪೂರ್ಣ ಚಂದ್ರಗ್ರಹಣವು ಜುಲೈ 28ರ ನಸುಕಿನವರೆಗೆ  ಉಳಿದಿರುತ್ತದೆ. ಚಂದ್ರನ ಮೇಲೆ ಗಾಢವಾದ ನೆರಳು ಬೀಳುವುದರಿಂದ, ಮಧ್ಯಾಹ್ನ 1ಗಂಟೆಗೆ ಪೂರ್ಣ ಚಂದ್ರಗ್ರಹಣ ಆರಂಭವಾಗಿ ಬರೋಬ್ಬರಿ 1 ಗಂಟೆ 43 ನಿಮಿಷ ರಕ್ತಚಂದ್ರಗ್ರಹಣ ಗೋಚರಿಸುತ್ತದೆ.

ಈ ಎರಡು ಮಹಾವಿಸ್ಮಯಗಳು ಒಂದೇ ಸಮಯಕ್ಕೆ ನಡೆಯುತ್ತಿರುವುದು ಜಗತ್ತಿನಲ್ಲಿ ಕುತೂಹಲದ ಜತೆ ಪ್ರಳಯದ ಭೀತಿಯನ್ನು ಸೃಷ್ಟಿಸಿದೆ. ಕೆಂಪು ಗ್ರಹ ಮಂಗಳನ  ವಿರಾಟ ರೂಪ ದರ್ಶನ ಮತ್ತು ರಕ್ತಚಂದಿರ ಎರಡೂ ಜತೆಜತೆಯಾಗಿ ಕಾಣುತ್ತಿರುವುದು ಪ್ರಳಯದ ಭೀತಿಗೆ ಕಾರಣವೆಂದು ಹೇಳಲಾಗುತ್ತಿದೆ

Recent Comments

Leave Comments

footer
Top