• 19 March 2019 05:19
Jai Kannada
Jai Kannada
Blog single photo
July 26, 2018

ಸದಾ ಟಿವಿ ನೋಡುತ್ತಿದ್ದ ಬಾಲಕಿಯ ಹತ್ಯೆ:  ಮಾಟಗಾತಿ, ಮಕ್ಕಳ ಬಂಧನ 

ಬೆಂಗಳೂರು: ಶಾರುಣ್ಯ ಎಂಬ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಟಗಾತಿ ಪ್ರಮೀಳಾ ಮತ್ತು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ಈ ಹತ್ಯೆ ನಡೆಸಲಾಗಿತ್ತು.

 ಮಗಳು ಶಾರುಣ್ಯ ಹೆಚ್ಚು ಟಿವಿ ನೋಡುತ್ತಿದ್ದರಿಂದ  ತಾಯಿ ಗಾಯತ್ರಿ ಮಾಟಗಾತಿ ಪ್ರಮೀಳಾನ್ನು ಭೇಟಿ ಮಾಡಿ ಅವಳ ಬಳಿ ಪರಿಹಾರ ಕೇಳಿದ್ದಳು. ಶಾರುಣ್ಯಳಿಗೆ ದೆವ್ವ ಮೆಟ್ಟಿಕೊಂಡಿದೆ. ತಾನು ದೆವ್ವ ಬಿಡಿಸುವುದಾಗಿ ಹೇಳಿ ಪ್ರಮೀಳಾ ಮತ್ತು ಮಕ್ಕಳು ದೊಣ್ಣೆ, ಸರಪಳಿಗಳಿಂದ ಹೊಡೆದಿದ್ದರಿಂದ  14 ವರ್ಷದ ಶಾರುಣ್ಯ ಮೃತಪಟ್ಟಿದ್ದಳು. ತಾನೇ ಕೊಲೆ ಮಾಡಿದ್ದಾಗಿ ತಾಯಿ ಹೇಳಿ ಪೊಲೀಸರಿಗೆ ಶರಣಾಗಿದ್ದರು.

ಆದರೆ ಪೊಲೀಸರು ಅನುಮಾನದಿಂದ ಮತ್ತಷ್ಟು ತನಿಖೆಗೆ ಒಳಪಡಿಸಿದಾಗ ಮಾಟಗಾತಿ ಪ್ರಮೀಳಾ ಹೆಸರನ್ನು  ತಾಯಿ ಬಾಯಿಬಿಟ್ಟಿದ್ದರು. ಪೊಲೀಸರು ಪ್ರಮೀಳಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ನಿಜವಿಷಯ ಬಯಲಾಗಿದೆ.  .ಜೈಲಿನಿಂದ ಗಾಯತ್ರಿಯನ್ನು ಬಿಡಿಸಿಕೊಂಡು ಬರುವುದಾಗಿ ಹೇಳಿದ್ದರಿಂದ ತಾನೇ ಕೊಲೆ ಮಾಡಿದ್ದಾಗಿ ತಾಯಿ ಗಾಯತ್ರಿ ಹೇಳಿದ್ದರು. ಎಚ್‌ಎಎಲ್ ವಿಜ್ಞಾನನಗರದಲ್ಲಿ ಪ್ರಮೀಳಾ ಮನೆಯಲ್ಲೇ ಈ ಹತ್ಯೆ ನಡೆದಿತ್ತು.

 ಗಾಯತ್ರಿಗೇ ಅವರೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಪ್ರಮೀಳಾ ಬೆದರಿಕೆ ಹಾಕಿದ್ದಳಲ್ಲದೇ ಒಪ್ಪದಿದ್ದರೆ ದೇವರ ಶಾಪ ನಿನಗೆ ತಟ್ಟುತ್ತದೆಂದು ಹೇಳಿದ್ದಳು. ಇದರಿಂದ ಬೆದರಿದ ಗಾಯತ್ರಿ ಮಗಳ ಕೊಲೆಯನ್ನು ತನ್ನ ಮೇಲೆ ಹಾಕಿಕೊಂಡಿದ್ದಳು. ಮಾಟಗಾತಿ ಪ್ರಮೀಳಾ ಮನೆಯಲ್ಲಿಯೇ ಈ ಕೃತ್ಯ ನಡೆದಿತ್ತು. ಮಗನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Recent Comments

Leave Comments

footer
Top