• 16 October 2018 09:07
Jai Kannada
Jai Kannada
Blog single photo
July 25, 2018

ಶೀರೂರು ಶ್ರೀ ನಿಗೂಢ ಸಾವು: ಸ್ವರ್ಣಾನದಿಯಲ್ಲಿ ಸಿಸಿಟಿವಿ ಕ್ಯಾಮರಾದ ಡಿವಿಆರ್ ಪತ್ತೆ 

ಶೀರೂರು: ಶೀರೂರು ಶ್ರೀಗಳ ನಿಗೂಢ ಸಾವು ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದ್ದು. ಸಿಸಿಟಿವಿ ಕ್ಯಾಮರಾದಲ್ಲಿರುವ ದೃಶ್ಯಗಳು ಬಹಿರಂಗವಾಗದಂತೆ ಕ್ಯಾಮರಾದ ಡಿವಿಆರ್ ನದಿಗೆ ಎಸೆದಿರುವ ಸಂಗತಿ ಬಯಲಾಗಿದೆ. 

ಶೀರೂರು ಮೂಲಮಠ ಸ್ವರ್ಣಾನದಿಯಲ್ಲಿ ಸಿಸಿಟಿವಿ ಕ್ಯಾಮರಾದ ಈ  ಡಿವಿಆರ್ ಪತ್ತೆಯಾಗಿದೆ. ಐವರು ಮುಳುಗುತಜ್ಞರು ಶೋಧ ನಡೆಸಿ ಡಿವಿಆರ್ ಪತ್ತೆಹಚ್ಚಿದ್ದಾರೆ. ಶ್ರೀಗಳ ನಿಕಟವರ್ತಿಗಳು ಡಿವಿಆರ್ ಅನ್ನು ನದಿಯಲ್ಲಿ ಎಸೆದಿರಬಹುದೆಂದು ಶಂಕಿಸಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಗಳು ಡಿವಿಆರ್‌ನಲ್ಲಿ ಸಂಗ್ರಹವಾಗಿರುತ್ತದೆ.

ಪೊಲೀಸರು ಮಠದ ಆವರಣದಲ್ಲಿ ಶೋಧ ನಡೆಸಿದಾಗ ಸಿಸಿಟಿವಿ ಫೂಟೇಜ್ ನಾಪತ್ತೆಯಾಗಿತ್ತು. ಮಠದ ಜನರನ್ನು ವಿಚಾರಿಸಿದಾಗ, ಲಕ್ಷ್ಮೀವರ ತೀರ್ಥರ ಭಕ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸ್ವಾಮೀಜಿಯನ್ನು ಆಸ್ಪತ್ರೆಗೆ ಸೇರಿಸಿದ ಕೂಡ ಮಠದೊಳಕ್ಕೆ ಪ್ರವೇಶಿಸಿದ್ದನೆಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ. ಶ್ರೀಗಳ ಸಾವಿನ ದಿನ ಏನಾಯಿತೆಂಬ ಬಗ್ಗೆ ನಿರ್ಣಾಯಕ ಸಾಕ್ಷ್ಯಾಧಾರ ಫೂಟೇಜ್‌ನಲ್ಲಿ ಇದ್ದಿರಬಹುದಾದ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಡಿವಿಆರ್ ಶೋಧಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಈ ಡಿವಿಆರ್‌ನಲ್ಲಿ ಸಾಕಷ್ಟು ಮಹತ್ವದ ಅಂಶಗಳಿರಬಹುದೆಂದು ಭಾವಿಸಲಾಗಿದೆ. ಈ ಡಿವಿಆರ್ ಅಥವಾ ಹಾರ್ಡ್‌ಡಿಸ್ಕ್ ಸುಸ್ಥಿತಿಯಲ್ಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಲಕ್ಷ್ಮೀವರ ತೀರ್ಥರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಶ್ರೀಗಳ ಜತೆ ಸಂಪರ್ಕವಿದ್ದ ಮಹಿಳೆ ಅವರ  ಸಾವಿಗೆ ಸಂಚು ನಡೆಸಿದ್ದಾರೆಯೇ, ರಿಯಲ್ ಎಸ್ಟೇಟ್ ಖದೀಮರು ಅವರ ಸಾವಿನಲ್ಲಿ ಕೈವಾಡ ನಡೆಸಿದ್ದಾರೆಯೇ ಮುಂತಾದ ನಾನಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಪೊಲೀಸರು ವಿಚಾರಣೆ ನಡೆಸಿದ್ದಾೆರ. 

Recent Comments

Leave Comments

footer
Top