• 18 August 2018 20:02
Jai Kannada
Jai Kannada
Blog single photo
July 20, 2018

 ಗೌರಿ ಹತ್ಯೆ ಆರೋಪಿ ವಾಗ್ಮೋರೆಗೆ ನೆರವಾದ ಮೋಹನ್ ನಾಯಕ್ ಬಂಧನ 

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿ ವಾಗ್ಮೋರೆಗೆ  ಸಹಾಯ ಮಾಡಿದ್ದ ಮೋಹನ್ ನಾಯಕ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ವಾಗ್ಮೋರೆಗೆ ಬೈಕ್, ಕಾರ್ ಅನ್ನು ಮೋಹನ್ ನಾಯಕ್ ನೀಡಿದ್ದು, ಅವನನ್ನು ಈಗ ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋಹನ್ ನಾಯಕ್ ದಕ್ಷಿಣ ಕನ್ನಡದ ಸುಳ್ಯದ ಸಂಪಾಜೆ ನಿವಾಸಿ ಎಂದು ಗೊತ್ತಾಗಿದೆ. ಗೌರಿ ಲಂಕೇಶ್ ಹತ್ಯೆ ಮಾಡುವ ವಿಚಾರ ನಾಯಕ್‌ಗೂ ಕೂಡ ತಿಳಿದಿತ್ತೆಂದು ಹೇಳಲಾಗಿದೆ.

ಬೆಂಗಳೂರಿನ ಹೊರವಲಯದ ಬಿಡದಿ ಸಮೀಪದ ಮನೆಯನ್ನು ಆರೋಪಿಗಳಿಗೆ ನಾಯಕ್ ಮಾಡಿಕೊಟ್ಟಿದ್ದ. ಗೌರಿ ಲಂಕೇಶ್ ಹತ್ಯೆಗೆ ಎಲ್ಲಾ ರೀತಿಯ ಸ್ಕೆಚ್ ಹಾಕಲು ಈ ಮನೆಯನ್ನು ಬಳಸಿಕೊಳ್ಳಲಾಗಿತ್ತು.

Recent Comments

Leave Comments

footer
Top