• 11 December 2018 14:34
Jai Kannada
Jai Kannada
Blog single photo
July 20, 2018

ಯುವತಿ ಚೆನ್ನಾಗಿದ್ದಾಳೆಂದು ಫೋಟೊ ತೆಗೆದ ಭದ್ರತಾ ಸಿಬ್ಬಂದಿ ಬಂಧನ 

ಬೆಂಗಳೂರು: ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸ್ನೇಹಿತೆಗಾಗಿ ಕಾಯುತ್ತಿದ್ದ ಯುವತಿಯ ಫೋಟೊ ಹಿಡಿದ ಒಡಿಸ್ಸಾ ಮೂಲದ ವ್ಯಕ್ತಿ ಭದ್ರತಾ ಸಿಬ್ಬಂದಿ ರಾಮಚಂದ್ರ ಎಂಬವನನ್ನು ಬಂಧಿಸಲಾಗಿದೆ.

ಅನುಮತಿ ಇಲ್ಲದೇ ಫೊಟೊ ತೆಗೆಯುವುದು ಕೂಡ ಕಾನೂನುಬಾಹಿರವೆಂದು ಹೇಳಲಾಗುತ್ತಿದ್ದು, ಅವನು ಫೋಟೊ ತೆಗೆದಕೂಡಲೇ ಯುವತಿ ಪ್ರತಿಭಟಿಸಿದಾಗ ಅವನು ಓಡಿಹೋಗಲು ಯತ್ನಿಸಿದಾಗ ಸ್ಥಳೀಯರು ಅವನನ್ನು ಹಿಡಿದು ಥಳಿಸುತ್ತಾರೆ.

ಅವನನ್ನು ಪ್ರಶ್ನಿಸಿದಾಗ ಯುವತಿ ನೋಡಲು ಚೆನ್ನಾಗಿದ್ದರಿಂದ ತಾನು ಫೋಟೊ ತೆಗೆದಿದ್ದಾಗಿ ಉತ್ತರಿಸಿದ್ದ ಇವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. 

Recent Comments

Leave Comments

footer
Top