• 18 August 2018 20:02
Jai Kannada
Jai Kannada
Blog single photo
July 20, 2018

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನಿರಾಕರಿಸಿದ ಕೇಂದ್ರದ ವಿರುದ್ಧ  ಟಿಡಿಪಿ ವಾಗ್ದಾಳಿ 

ನವದೆಹಲಿ: ಲೋಕಸಭೆಯಲ್ಲಿ ಟಿಡಿಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಟಿಡಿಪಿ ಸಂಸದರಾದ ಶ್ರೀನಿವಾಸ್ ಮತ್ತು ಜಯದೇವ್ ಗಲ್ಲಾ ಅವಿಶ್ವಾಸ ನಿರ್ಣಯ ಮಂಡಿಸಿದರು. ವಿಶೇಷ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಟಿಡಿಪಿ ಸದಸ್ಯರು ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದರು. ಜಯದೇವ್ ಗಲ್ಲಾ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನಿರಾಕರಿಸಿದ ಕೇಂದ್ರದ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು. ಜಯದೇವ್ ಮಾತಿಗೆ ಕಲಾಪದಲ್ಲಿ ಗಲಾಟೆ ಆರಂಭವಾಯಿತು.

ಭರತ್ ಅನೆ ನೆನು ಸಿನಿಮಾ ವಿಚಾರವನ್ನು ಅವರು ಪ್ರಸ್ತಾಪಿಸಿದಾಗ ಟಿಆರ್‌ಎಸ್ ಗದ್ದಲವೆಬ್ಬಿಸಿತು. ತೆಲಂಗಾಣ ಹೊಸ ರಾಜ್ಯವಲ್ಲ, ಆಂಧ್ರಪ್ರದೇಶವೇ ಹೊಸ ರಾಜ್ಯವೆಂದು ಜಯದೇವ್ ಹೇಳಿದರು. ಆಂಧ್ರಪ್ರದೇಶದ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗ್ತಿದೆ. ಆಂಧ್ರ ವಿಭಜನೆಯಾದ ಬಳಿಕ ಕಡಿಮೆ ಜನಸಂಖ್ಯೆಯಿರುವ ತೆಲಂಗಾಣದಲ್ಲಿ ಹೆಚ್ಚು ಸಂಪನ್ಮೂಲವಿದೆ ಮತ್ತು ಹೆಚ್ಚು ಜನಸಂಖ್ಯೆಯಿರುವ ಆಂಧ್ರದಲ್ಲಿ ಕಡಿಮೆ ಸಂಪನ್ಮೂಲವಿದೆ ಎಂದು ಆರೋಪಿಸಿದರು.

ಆಸ್ತಿ ತೆಲಂಗಾಣಕ್ಕೆ ಮತ್ತು ಸಾಲವನ್ನು ಆಂಧ್ರಕ್ಕೆ ಕೊಡಲಾಗಿದೆ ಎಂದು ಜಯದೇವ್ ಆರೋಪಿಸಿದರು. ಆಂಧ್ರದ 5 ಕೋಟಿ ಜನರಿಗೆ ಅನ್ಯಾಯವಾಗಿದೆ ಎಂದು ಜಯದೇವ್ ಹೇಳಿದರು. 4 ವರ್ಷ ದಾಟಿದ್ರೂ ಇನ್ನೂ ಯಾವುದೇ ಪರಿಹಾರವಿಲ್ಲ ಎಂದು ಹೇಳಿದರು.  ಈ ನಡುವೆ ಜನಾರ್ದನ ರೆಡ್ಡಿ ವಿಷಯವೂ ಸದನದಲ್ಲಿ ಪ್ರಸ್ತಾಪವಾಯಿತು.ಜನಾರ್ದನ ರೆಡ್ಡಿ ಮತ್ತು ಕುಟುಂಬದ ವಿರುದ್ಧ ಹಲವು ಕೇಸುಗಳಿದ್ದರೂ ಅವರು ಖುಲಾಸೆಯಾಗುತ್ತಿದ್ದಾರೆ. ಅಂತಹವರ ಕುಟುಂಬಸ್ಥರು ಕೂಡ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನಿಮ್ಮ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಲ್ಲಿಗೆ ಬಂತು ಎಂದು ಗಲ್ಲಾ ಪ್ರಶ್ನಿಸಿದರು. 

ಜೈಕನ್ನಡ.ಕಾಂ ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top