• 11 December 2018 15:40
Jai Kannada
Jai Kannada
Blog single photo
July 20, 2018

ಇಂದು  ಅವಿಶ್ವಾಸ ಮತ ನಿರ್ಣಯದಲ್ಲಿ  ಸುಲಭವಾಗಿ ಗೆಲ್ಲುವ ನಿರೀಕ್ಷೆ 

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದ ಟಿಡಿಪಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿರುವುದು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ.  ಚುನಾವಣೆಗೆ ಇನ್ನು 10 ತಿಂಗಳು ಮಾತ್ರ ಬಾಕಿಯಿರುವ ಸಂದರ್ಭದಲ್ಲಿ ಈ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅದರ ಮೇಲೆ ಚರ್ಚೆ ನಡೆಯಲಿದ್ದು, ನಂತರ ಅವಿಶ್ವಾಸ ನಿರ್ಣಯ ಕುರಿತು ವೋಟಿಂಗ್ ನಡೆಯಲಿದೆ.

ಆದರೆ ಅವಿಶ್ವಾಸ ನಿರ್ಣಯದಲ್ಲಿ ಸುಲಭವಾಗಿ ಗೆದ್ದುಬರುವ ವಿಶ್ವಾಸವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಲೋಕಸಭೆಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 543ರಲ್ಲಿ 10 ಸ್ಥಾನಗಳು ತೆರವಾಗಿರುವುದರಿಂದ 533ಕ್ಕೆ ಕುಸಿದಿದೆ. ಅವಿಶ್ವಾಸ ನಿರ್ಣಯಕ್ಕೆ ಮುನ್ನ 7 ಗಂಟೆಗಳ ಕಾಲ ಚರ್ಚೆ ನಡೆಯುತ್ತದೆ. ಈ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅವಕಾಶ ಸಿಗುತ್ತದೆ.

ಸರ್ಕಾರದ ಬಲಾಬಲ ಲೆಕ್ಕಹಾಕಿದರೆ, ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಒಕ್ಕೂಟದಲ್ಲಿ ಒಟ್ಟು 148 ಸದಸ್ಯ ಬಲವಿದೆ.
ಆದರೆ ಬಿಜೆಪಿ ಮತ್ತು ಮಿತ್ರಪಕ್ಷಗಳಾದ ಎನ್‌ಡಿಎ ಸೇರಿ  ಒಟ್ಟು 312 ಸದಸ್ಯರ ಬೆಂಬಲವಿರುವುದರಿಂದ ಎನ್‌ಡಿಎ ಸುಲಭವಾಗಿ ಗೆಲ್ಲುತ್ತದೆಂದು ನಿರೀಕ್ಷಿಸಲಾಗಿದೆ. ತಮಿಳುನಾಡಿನ ಎಡಿಎಂಕೆ, ತೆಲಂಗಾಣದ ಟಿಆರ್‌ಎಸ್ ತಟಸ್ಥವಾಗುಳಿಯಲು ನಿರ್ಧರಿಸಿದೆ. 

 

Recent Comments

Leave Comments

footer
Top