ಬೆಂಗಳೂರು: ಜಿಲ್ಲಾ ಉಸ್ತುವಾರಿ ಪಟ್ಟಿಗೆ ಅಂತಿಮ ರೂಪ ನೀಡಲಾಗಿದ್ದು, ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಹೆಸರನ್ನು ಇಂದು ಪ್ರಕಟಿಸಲಾಗುತ್ತದೆ. ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರಲು ಜಿಲ್ಲಾ ಉಸ್ತುವಾರಿ ಸಚಿವರನ್ನು ತಕ್ಷಣಕ್ಕೆ ನೇಮಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
ರಾಮನಗರ, ಬಳ್ಳಾರಿಗೆ ಡಿಕೆಶಿ, ಕೋಲಾರ ಗದಗ- ಕೃಷ್ಣ ಭೈರೇಗೌಡ, ಕಲ್ಬುರ್ಗಿ, ಯಾದಗಿರಿ- ಖರ್ಗೆ, ಮೈಸೂರು-ಜಿಟಿ ದೇವೇಗೌಡ, ಕೊಡಗಿಗೆ ಜಾರ್ಜ್, ಉಡುಪಿಗೆ ಜಯಮಾಲಾ, ಮಂಡ್ಯಕ್ಕೆ ಪುಟ್ಟರಾಜು, ತುಮಕೂರು-ಶ್ರೀನಿವಾಸ್, ಹಾಸನ- ರೇವಣ್ಣ, ದ.ಕನ್ನಡ- ಖಾದರ್, ಚಾಮರಾಜನಗರ-ಪುಟ್ಟರಂಗ ಶೆಟ್ಟಿ, ಶಿವಮೊಗ್ಗ-ಡಿ,ಸಿ.ತಮ್ಮಣ್ಣ, ಬೆಂಗಳೂರು ನಗರ -ಪರಮೇಶ್ವರ್, ಹಾವೇರಿ-ಆರ್. ಶಂಕರ್, ವಿಜಯಪುರ-ಶಿವಾನಂದ ಪಾಟೀಲ್ ಅವರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡುವುದನ್ನು ನಿರೀಕ್ಷಿಸಲಾಗಿದೆ.
Recent Comments