• 11 December 2018 15:04
Jai Kannada
Jai Kannada
Blog single photo
July 20, 2018

ಪೊಲೀಸ್ ವಸತಿಗೃಹಕ್ಕೆ ಬೆಂಕಿ: ಪೇದೆ ಪತ್ನಿ, ಪಿಐ ವಿರುದ್ಧ ಕೇಸ್ ದಾಖಲು 

.ಬಳ್ಳಾರಿ: ಬಳ್ಳಾರಿಯ ಪೊಲೀಸ್ ಡಿಎಆರ್ ವಸತಿಗೃಹದಲ್ಲಿ ಬೆಂಕಿಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಪಿಐ ಕಿರಣ್ ಸಾಮ್ರಾಟ್ ಮತ್ತು ಪೇದೆಯೊಬ್ಬರ ಪತ್ನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. 

ಪೇದೆ ಪತ್ನಿ ಜತೆ ಪಿ.ಐ ಕಿರಣ್ ಸಾಮ್ರಾಟ್ ಅಕ್ರಮ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಗಿದೆ.  ಮೊನ್ನೆ ರಾತ್ರಿ ಕಿರಣ್ ಮತ್ತು ಪೇದೆ ಪತ್ನಿ ಇಬ್ಬರೂ ಕ್ವಾರ್ಟರ್ಸ್‌ನಲ್ಲಿದ್ದಾಗ ಅವರಿಬ್ಬರ ನಡುವೆ ಜಗಳವಾಗಿ ಪೇದೆ ಪತ್ನಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚಿದ್ದರಿಂದ ಅದು ಉರಿದುಹೋಗಿದೆಯೆಂದು ಗೊತ್ತಾಗಿದೆ.

. ಕಿರಣ್ ಸಾಮ್ರಾಟ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪೇದೆಯ ಪತ್ನಿಯ ಜತೆ ಅಕ್ರಮ ಸಂಬಂಧವನ್ನು ಮದುವೆಗೆ ಮುಂಚೆಯೇ ಹೊಂದಿದ್ದರೆಂದು ಹೇಳಲಾಗುತ್ತಿದೆ.  ಪೊಲೀಸರು ಪೇದೆಯ ಪತ್ನಿ ಮತ್ತು ಪಿಐ ಕಿರಣ್ ಸಾಮ್ರಾಟ್ ಇಬ್ಬರನ್ನೂ ತನಿಖೆಗೆ ಒಳಪಡಿಸಿದ್ದಾರೆ. 

 

 

Recent Comments

Leave Comments

footer
Top