• 14 December 2018 13:12
Jai Kannada
Jai Kannada
Blog single photo
July 14, 2018

ಪಾಕಿಸ್ತಾನಕ್ಕೆ ಹಿಂತಿರುಗಿದ ನವಾಜ್ ಷರೀಫ್ ಬಂಧನ : ಕೋರ್ಟ್‌ಗೆ ಹಾಜರು 

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದ್ದು, ಕೋರ್ಟ್‌ಗೆ ಇಂದು ಹಾಜರುಪಡಿಸಲಾಗುತ್ತದೆ. ಲಂಡನ್‌ನಿಂದ ಕರಾಚಿಗೆ ಬಂದಿಳಿದ ನವಾಜ್ ಷರೀಫ್ ಅವರಿಗೆ ಕೈಕೋಳಗಳು ಸ್ವಾಗತಿಸಿ ನೇರವಾಗಿ ಜೈಲಿಗೆ ಒಯ್ಯಲಾಯಿತು.

 ಜೈಲಿನಲ್ಲಿ ವಿಶೇಷ ಸೌಲಭ್ಯ ಬೇಕಿದ್ದರೆ ಕೋರ್ಟ್‌ಗೆ ಮನವಿ ಮಾಡಿಕೊಳ್ಳಬಹುದೆಂದು ಅಧಿಕಾರಿಗಳು ತಿಳಿಸಿದ್ದರು. ಷರೀಫ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಅವರ ಪಾಸ್‌ಪೋರ್ಟ್ ಕೂಡ ವಶಪಡಿಸಿಕೊಳ್ಳಲಾಗಿದೆ.

ಈ ತಿಂಗಳ 25ನೇ ತಾರೀಖು ಸಂಸತ್ತಿನ ಚುನಾವಣೆ ನಡೆಯಲಿದ್ದು, ತಾವು ಜನರ ಅನುಕಂಪ ಅಲೆ ಗಳಿಸಿಕೊಳ್ಳುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಬಹುದು ಎಂದು ನವಾಜ್ ಷರೀಫ್ ಯೋಜಿಸಿದ್ದರು. ಆದರೆ ನವಾಜ್ ಷರೀಫ್ ಯೋಜನೆಯೆಲ್ಲಾ ತಲೆಕೆಳಗಾಗಬಹುದೆಂದು ಭಾವಿಸಲಾಗಿದೆ.

Recent Comments

Leave Comments

footer
Top