ಜಮ್ಮು: ಪಿಡಿಪಿ ಪಕ್ಷವನ್ನು ಒಡೆದರೆ ಅದರ ಪರಿಣಾಮ ಅಪಾಯಕಾರಿಯಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎಚ್ಚರಿಸಿದ್ದಾರೆ.ಅವರ ಹೇಳಿಕೆಯಲ್ಲಿ ಬಿಜೆಪಿಯನ್ನು ಉಲ್ಲೇಖಿಸಲಾಗಿದ್ದು, ಕುದುರೆ ವ್ಯಾಪಾರ ಮತ್ತು ಪಕ್ಷಾಂತರ ಪಿಡಿಪಿಯಲ್ಲಿ ನಡೆಯುತ್ತಿರುವ ವರದಿಗಳ ಮಧ್ಯೆ ಅವರ ಹೇಳಿಕೆ ಹೊರಬಿದ್ದಿದೆ. ಬಿಜೆಪಿಯು ಪಿಡಿಪಿ ಮೈತ್ರಿಯನ್ನು ಮುರಿದಮೇಲೆ ಬಂಡಾಯ ಪಿಡಿಪಿ ಶಾಸಕರ ಜತೆ ರಾಜ್ಯದಲ್ಲಿ ಸರ್ಕಾರ ರಚಿಸಲು ಯತ್ನಿಸುತ್ತಿದೆ ಎಂಬ ಊಹಾಪೋಹ ದಟ್ಟವಾಗಿದೆ.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಕೂಡ ಕುದುರೆವ್ಯಾಪಾರದ ಬಗ್ಗೆ ಸುಳಿವು ನೀಡಿದ್ದರು. ಪಕ್ಷದ ನಿಷ್ಠೆಯನ್ನು ಒಡೆಯುವುದಕ್ಕೆ ಈ ರೀತಿ ಪ್ರಯತ್ನಿಸಿದರೆ, ಸಲಾಹುದ್ದೀನ್ ಅಥವಾ ಯಾಸಿನ್ ಮಾಲಿಕ್ ಬೆಳಕಿಗೆ ಬಂದ ರೀತಿಯಲ್ಲಿ ಪುನರಾವರ್ತನೆಯಾಗುತ್ತದೆ.
ದೆಹಲಿಯಿಂದ ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಅದರ ಪರಿಣಾಮ ತುಂಬಾ ಅಪಾಯಕಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಮುಫ್ತಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ತೆಗೆದುಕೊಂಡ ಬಳಿಕ ಈಗ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿದೆ.
Recent Comments