ಮೆಲ್ಬರ್ನ್: ಬ್ರಹ್ಮಾಂಡದಲ್ಲಿರುವ ಅತೀ ವೇಗವಾಗಿ ಬೆಳೆಯುವ ಕಪ್ಪು ರಂಧ್ರವನ್ನು ವಿಜ್ಞಾನಿಗಳು ಶೋಧಿಸಿದ್ದಾರೆ. ನಮ್ಮ ಸೂರ್ಯನಿಗೆ ಸಮನಾದ ಗಾತ್ರದ ದ್ರವ್ಯರಾಶಿಯನ್ನು 2 ದಿನಕ್ಕೊಮ್ಮೆ ನುಂಗುವ ದೈತ್ಯ ಕಪ್ಪು ರಂಧ್ರ ಇದಾಗಿದೆ.
ಈ ಕಪ್ಪು ರಂಧ್ರವು ವೇಗವಾಗಿ ವರ್ಧಿಸುತ್ತಿದ್ದು, ಇಡೀ ಗ್ಯಾಲಕ್ಸಿಗಿಂತ ಒಂದು ಸಾವಿರ ಪಟ್ಟು ಪ್ರಕಾಶಮಾನವಾಗಿ ಬೆಳಗುತ್ತಿದೆ. ಇದು ದಿನನಿತ್ಯ ಎಲ್ಲ ಅನಿಲಗಳನ್ನು ಹೀರಿಕೊಳ್ಳುವುದರಿಂದ ತುಂಬಾ ಘರ್ಘಣೆ ಮತ್ತು ಶಾಖವನ್ನು ಉಂಟುಮಾಡುತ್ತದೆ ಎಂದು ಆಸ್ಟ್ರೇಲಿಯಾ ವಿವಿಯ ಕ್ರಿಶ್ಚಿಯನ್ ವುಲ್ಫ್ ಹೇಳಿದ್ದಾರೆ.
ನಮ್ಮ ಕ್ಷೀರಪಥದ ಮಧ್ಯದಲ್ಲಿ ಈ ದೈತ್ಯನಿದ್ದಿದ್ದರೆ, ಪೂರ್ಣ ಚಂದ್ರನಿಗಿಂತ 10 ಪಟ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿತ್ತು. ಹೊಸದಾಗಿ ಪತ್ತೆಹಚ್ಚಲಾದ ಬೃಹತ್ ಕಪ್ಪು ರಂಧ್ರವು ಕ್ವಾಸಾರ್ ಎಂದು ಹೆಸರಾಗಿದ್ದು, ಇದರಿಂದ ಹೊಮ್ಮುವ ಶಕ್ತಿಯು ಉಲ್ಟ್ರಾವೈಲಟ್ ಬೆಳಕಿನಿಂದ ಹೆಚ್ಚು ಕೂಡಿದ್ದು, ವಿಕಿರಣ ಎಕ್ಸ್ ರೇಗಳನ್ನು ಕೂಡ ಹೊಂದಿದೆ.
ಇದು ಕ್ಷೀರಪಥದ ಮಧ್ಯದಲ್ಲಿ ಇದ್ದಿದ್ದರೆ, ಅದರಿಂದ ಹೊಮ್ಮುವ ಭಾರೀ ಪ್ರಮಾಣದ ಎಕ್ಸರೇಯಿಂದ ಭೂಮಿಯ ಮೇಲೆ ಜೀವನ ಅಸಾಧ್ಯವಾಗಿಸುವ ಸಂಭವವಿತ್ತು.
Recent Comments