• 21 October 2018 22:47
Jai Kannada
Jai Kannada
Blog single photo
July 07, 2018

ಪ್ರೇತಗಳ ಅನುಭವ ನೀಡುವ ಹಾರರ್ ಚಿತ್ರದಲ್ಲಿ ರವಿ ಕಿಶನ್ 

ನವದೆಹಲಿ: ಭೋಜಪುರಿ ಚಿತ್ರರಂಗದ ಖ್ಯಾತ ನಟ ರವಿ ಕಿಶನ್ 'ಬಾಯ್ರಿ ಕಾಂಗ್ನಾ 2' ಎಂಬ ಹಾರರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿನ ಶೂಟಿಂಗ್ ಕುರಿತು ತಮ್ಮ ಅನುಭವಗಳನ್ನು ರವಿ ಕಿಶನ್ ಹಂಚಿಕೊಂಡಿದ್ದಾರೆ. ನಾವು ನಮ್ಮ ಬಾಲ್ಯದಲ್ಲಿ ಪ್ರೇತಗಳು ಮತ್ತು ದೆವ್ವಗಳ ಬಗ್ಗೆ ಕಥೆ ಕೇಳಿದ್ದೇವೆ. ಆದರೆ ವಾಸ್ತವವಾಗಿ ಅವರು ಭೂತದ ನೋವನ್ನು ಈ ಚಿತ್ರದ ಶೂಟಿಂಗ್ ವೇಳೆ ಅನುಭವಿಸಿದರು. ಕಿಶನ್ ದೇಹವನ್ನು ಪ್ರೇತ ಪ್ರವೇಶಿಸುವ ಅಭಿನಯದಲ್ಲಿ ನಟ ಪ್ರೇತದ ನೋವಿನ ಅನುಭವವನ್ನು ತಮ್ಮ ನಟನೆಯಲ್ಲಿ ಪ್ರದರ್ಶಿಸಬೇಕು

ಪ್ರೇತಗಳ ಬಗ್ಗೆ ವಿಜ್ಞಾನಿಯೊಬ್ಬರು ಸಂಶೋಧನೆ ಮಾಡಿರುವ ಪ್ರಕಾರ, ಕೆಲವು ಆತ್ಮಗಳಲ್ಲಿ ಅತೃಪ್ತ ಇಚ್ಛೆಗಳಿರುತ್ತವಂತೆ. ಈ ಆತ್ಮಗಳ ಅಕಾಲಿಕ ನಿಧನದಿಂದ ಅವುಗಳ ಇಚ್ಛೆಗಳು ಈಡೇರದೇ ಮೋಕ್ಷ ಸಾಧಿಸಲಾಗದೇ ಅವು ಪ್ರೇತಗಳಾಗಿ ಅಲೆದಾಡುತ್ತವೆ.

ಬೈರಿ ಕಾಂಗ್ನಾ 2 ಚಿತ್ರವನ್ನು ಅಶೋಕ್ ಶ್ರೀವಾತ್ಸವ ನಿರ್ಮಿಸಿದ್ದು, ಅಶೋಕ್ ತ್ರಿಪಾಠಿ ನಿರ್ದೇಶನ ಮಾಡಿದ್ದಾರೆ. ಬೈರಿ ಕಾಂಗ್ನಾದಲ್ಲಿ ಕಾಜಲ್ ರಾಘವಾನಿ, ಶುಭಿ ಶರ್ಮಾ, ಅವಧೇಶ್ ಮಿಶ್ರಾ, ಕುನಾಲ್ ಸಿಂಗ್, ಸಪ್ನಾ ಚೌಧರಿ ಅಭಿನಯಿಸಿದ್ದಾರೆ. 
 

Recent Comments

Leave Comments

footer
Top