ನಿಜ್ನಿ ನೊವ್ಗೊರಾಡ್: ರಾಫೆಲ್ ವರಾನೆಯ ಹೆಡರ್ ಮತ್ತು ಆಂಟೋಯ್ನ್ ಗ್ರೀಜ್ಮ್ಯಾನ್ ಗೋಲ್ನತ್ತ ಬಾರಿಸಿದ ಚೆಂಡನ್ನು ತಡೆಯಲು ಹೋದ ಗೋಲ್ ಕೀಪರ್ ಪ್ರಮಾದಿಂದ ಫ್ರಾನ್ಸ್ ಉರುಗ್ವೆ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.
ಸೆಮಿಫೈನಲ್ನಲ್ಲಿ ಅದು ಬ್ರೆಜಿಲ್ ಮತ್ತು ಬೆಲ್ಜಿಯಂ ನಡುವೆ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಮುಖ್ಯ ಸ್ಟ್ರೈಕರ್ ಎಡಿಸನ್ ಕವಾನಿ ಗಾಯಗೊಂಡು ಆಡದಿರುವುದು ಉರುಗ್ವೆ ಆಟದ ಮೊನಚು ಕಳೆದುಕೊಂಡಿತು. ಪೋರ್ಚುಗಲ್ ವಿರುದ್ಧ 2 ಗೋಲುಗಳನ್ನು ಬಾರಿಸಿದ್ದ ಕವಾನಿ ರಹಿತವಾಗಿ ಉರುಗ್ವೆ ಆಟ ಸಪ್ಪೆಯಾಗಿತ್ತು.
Recent Comments