• 19 March 2019 05:19
Jai Kannada
Jai Kannada
Blog single photo
July 06, 2018

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದರೂ ಮಿಥುನ್ ಪುತ್ರ ಮಹಾಕ್ಷಯ್ ವಿವಾಹ

ನವದೆಹಲಿ:  ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಅತ್ಯಾಚಾರದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಜುಲೈ 7ರಂದು ಹಸೆಮಣೆಗೆ ಏರಲಿದ್ದಾನೆ. ಆದರೆ ಅತ್ಯಾಚಾರದ ಆರೋಪ ಮಾಡಿದ ಯುವತಿಯನ್ನು ಬಿಟ್ಟು ಬೇರೊಂದು ಯುವತಿಯನ್ನು ವಿವಾಹವಾಗಲಿದ್ದಾನೆ. ಕೆಲವು ದಿನಗಳ ಹಿಂದೆ ಭೋಜ್‌ಪುರಿ ನಟಿಯೊಬ್ಬಳು ಮಹಾಕ್ಷಯ್ ತನ್ನನ್ನು ಪ್ರೀತಿಸುವ ನಾಟಕವಾಡಿ ಮಾನಭಂಗ ಮಾಡಿದ್ದಾನೆಂದು ಆರೋಪಿಸಿದ್ದಳು. ವಿವಾಹವಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳ ಕಾಲ ಅವಳ ಜತೆ ಮಹಾಕ್ಷಯ್ ದೈಹಿಕ ಸಂಬಂಧ ಹೊಂದಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಳು, ಅವಳು ಗರ್ಭಿಣಿಯಾದಾಗ ಅವನು ಕೊಟ್ಟ ಔಷಧಗಳನ್ನು ಸೇವಿಸಿ ಗರ್ಭಪಾತವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾಳೆ. 

ಇವೆಲ್ಲಾ ಕಾನೂನು ತಿಕ್ಕಾಟದ ನಡುವೆ, ಮಹಾಕ್ಷಯ್ ನಟಿ ಶೀಲಾ ಶರ್ಮಾ ಪುತ್ರಿ ಮದಲ್ಸಾ ಶರ್ಮಾಳನ್ನು ಮದುವೆಯಾಗಲಿದ್ದಾನೆ.
ಈ ನಡುವೆ ರೇಪ್ ದೂರು ನೀಡಿದ ಯುವತಿ ಮಹಾಕ್ಷಯ್ ತಾಯಿ, ಹಿರಿಯ ನಟಿ ಯೋಗಿತಾ ಬಾಲಿ ಪುತ್ರನ ಜತೆ ಅಕ್ರಮ ಸಂಬಂಧ ಹೊಂದಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಮುಂಬೈ ಹೈಕೋರ್ಟ್ ಮಿಥುನ್ ಚಕ್ರವರ್ತಿ ಪತ್ನಿ ಮತ್ತು ಪುತ್ರನ ಬಂಧನದಿಂದ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
 

Recent Comments

Leave Comments

footer
Top