• 17 December 2018 12:54
Jai Kannada
Jai Kannada
Blog single photo
July 04, 2018

ಕಿಚ್ಚ, ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಎರಡು ಟೀಸರ್ 

ಬೆಂಗಳೂರು: ಸ್ಯಾಂಡಲ್ ವುಡ್‌ನಲ್ಲಿ ಬಿಡುಗಡೆಯಾದ ವಿಲನ್ ಚಿತ್ರದ ಎರಡು  ಟೀಸರ್ ದೊಡ್ಡ ಸಂಚಲನ ಉಂಟುಮಾಡಿದೆ. ನಾನು ಸೈಲಂಟ್ ಆದ್ರೆ ರಾಮ, ವೈಲಂಟ್ ಆದ್ರೆ ರಾವಣ ಎಂದು ಶಿವಣ್ಣ ಡೈಲಾಗ್ ಇರುವ ಟೀಸರ್ ಬಿಡುಗಡೆಯಾಗಿತ್ತು. ಇದರ ಜತೆಗೆ ಕಿಚ್ಚ ಸುದೀಪ್ ಆರ್ಭಟವಿರುವ ಇನ್ನೊಂದು ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು.

 ಇವೆರಡು ಟೀಸರ್ ಬಿಡುಗಡೆಯಾದ ಮೇಲೆ ಕಿಚ್ಚ ಹಾಗೂ ಶಿವಣ್ಣ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ. ಸುದೀಪ್ ಸೂಪರ್ ಎಂದು ಕಿಚ್ಚನ ಅಭಿಮಾನಿಗಳು ಹೇಳುತ್ತಿದ್ದರೆ, ಶಿವಣ್ಣನನ್ನು ಕಡೆಗಣಿಸಲಾಗಿದೆ ಎಂದು ನಿರ್ದೇಶಕ ಪ್ರೇಮ್ ವಿರುದ್ಧ ಶಿವಣ್ಣನ ಅಭಿಮಾನಿಗಳು ಗರಂ ಆಗಿದ್ದಾರೆ.

ಸುದೀಪ್ ಅವರ ಟೀಸರ್‌ಗೆ ಅತೀ ಹೆಚ್ಚು ಲೈಕ್ಸ್ ಕೂಡ ಬಂದಿದ್ದರಿಂದ ಕಿಚ್ಚನ ಮುಂದೆ ಶಿವಣ್ಣ ಮಂಕಾದಂತೆ ಕಂಡುಬಂದರು. ಈ ನಡುವೆ ವಿಲನ್ ಚಿತ್ರ ವೀಕ್ಷಿಸದಿರಲು ಶಿವಣ್ಣ ಅಭಿಮಾನಿಗಳು ನಿರ್ಧರಿಸಿದ್ದಾರೆ. 

Recent Comments

Leave Comments

footer
Top