• 16 October 2018 09:07
Jai Kannada
Jai Kannada
Blog single photo
July 02, 2018

ಸ್ಟಾರ್ ವಾರ್ಸ್ ಬಂದೂಕು ಅಭಿವೃದ್ಧಿಪಡಿಸಿದ ಚೀನಾ 

ಬೀಜಿಂಗ್: ಬಲಿಷ್ಠ ರಾಷ್ಟ್ರಗಳು ಮಾರಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮೂಲಕ ತಮ್ಮ ವೈರಿ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುತ್ತಿರುವ ನಡುವೆ, ಚೀನಾ ಸುಮಾರು ಒಂದು ಕಿಮೀ ದೂರದ ಗುರಿಗೆ ಶಕ್ತಿ ಕಿರಣ ಹಾಯಿಸಿ ಮಾನವ ಜೀವಕೋಶಗಳನ್ನು ಭೇದಿಸುವ ಬಂದೂಕೊಂದನ್ನು ಅಭಿವೃದ್ಧಿಪಡಿಸಿದೆ. ಜಡ್‌ಕೆ‌ಜಡ್‌ಎಂ-500 ಹೆಸರಿನ ಲೇಸರ್ ಪ್ರಹಾರ ಬಂದೂಕು ಸ್ಟಾರ್ಸ್ ವಾರ್ಸ್ ಚಿತ್ರಸರಣಿಯಲ್ಲಿ ಬಳಸಿದ ಲೈಟ್ಸ್‌ಸೇಬರ್‌ಗೆ  ಹೋಲುತ್ತದೆ.

ಈ ಆಯುಧವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಈ ಬಂದೂಕು 3 ಕೆಜಿ ಭಾರವಿದ್ದು, ಎಕೆ-47 ರೀತಿಯ ಆಕಾರ ಹೊಂದಿರುವುದಾಗಿ ತಿಳಿಸಿದ್ದಾರೆ. ಇದರ ಪರಿಣಾಮ ಮಾತ್ರ ತೀಕ್ಷ್ಣವಾಗಿರುತ್ತದೆ. ಬಂದೂಕಿನಿಂದ ಹೊರಡುವ ಕಿರಣವು ಕಣ್ಣಿಗೆ ಗೋಚರಿಸುವುದಿಲ್ಲ. ಆದರೆ ಉದ್ದೇಶಿತ ಗುರಿಯತ್ತ  ನೂರಾರು ಮೀಟರ್ ಪ್ರಯಾಣಿಸುತ್ತದೆ. ಈ ತೀಕ್ಷ್ಣ ಕಿರಣವು ಶತ್ರುವಿನ ಚರ್ಮವನ್ನು ಭೇದಿಸಿ ಯಾತನಾಮಯ ಸಾವನ್ನು ತಂದಿಡುತ್ತದೆ.

ಲಿಥುಯಮ್ ಬ್ಯಾಟರಿಯಿಂದ ಚಾರ್ಜ್ ಆಗುವ ಈ ಬಂದೂಕನ್ನು ಕಾರುಗಳು, ದೋಣಿಗಳು ಮತ್ತು ವಿಮಾನಗಳಲ್ಲಿ ಕೂಡ ಅಳವಡಿಸಿ ವಿವಿಧ ಕಾರ್ಯಾಚರಣೆಗಳಿಗೆ ಬಳಸಬಹುದು.
 

Recent Comments

Leave Comments

footer
Top