• 17 February 2019 13:16
Jai Kannada
Jai Kannada
Blog single photo
June 30, 2018

ಇಂದು ರೊನಾಲ್ಡೊ, ಮೆಸ್ಸಿ  ಫುಟ್ಬಾಲ್ ಸೂಪರ್ ಸ್ಟಾರ್‌ಗಳಿಬ್ಬರ ಆಟ

ವಿಶ್ವ ಕಪ್ ಫುಟ್ಬಾಲ್ ತಂಡದ ಸೂಪರ್ ಸ್ಟಾರ್‌ಗಳಾದ, GOAT (ಸರ್ವಕಾಲೀನ ಮಹಾನ್ ಆಟಗಾರರು) ಪ್ರಶಸ್ತಿಗೆ ಸ್ಪರ್ಧಿಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೊನೆಲ್ ಮೆಸ್ಸಿ ಇಬ್ಬರು ನಾಕೌಟ್ ಪಂದ್ಯಗಳಲ್ಲಿ ತಮ್ಮ ಕಾಲ್ಚಳಕ ತೋರಿಸಲು ಸಜ್ಜಾಗಿದ್ದಾರೆ. ಮೆಸ್ಸಿಯ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡದ ವಿರುದ್ಧ ನಾಕೌಟ್ ಪಂದ್ಯವಾಡಿದರೆ, ರೋನಾಲ್ಡೊ ಪೋರ್ಚುಗಲ್ ತಂಡವು ಉರುಗ್ವೆ ವಿರುದ್ಧ ಆಡಲಿದೆ. ಇಲ್ಲಿಯವರೆಗೆ ರೊನಾಲ್ಡೊ ಒಂದು ಹ್ಯಾಟ್ರಿಕ್ ಸೇರಿದಂತೆ ಒಟ್ಟು 4 ಗೋಲು ಬಾರಿಸುವ ಮೂಲಕ ತಮ್ಮ ಪುಟ್ಬಾಲ್ ಕೌಶಲ ತೋರಿಸಿದ್ದಾರೆ.

ಆದರೆ ಅವರು ಇರಾನ್ ವಿರುದ್ಧ ಪೆನಾಲ್ಟಿ ಕಿಕ್ ಹೊಡೆಯುವುದಕ್ಕೆ ವಿಫಲರಾದರು ಮತ್ತು ಒಂದು ಎಲ್ಲೊ ಕಾರ್ಡ್ ಕೂಡ ಪಡೆದುಕೊಂಡಿದ್ದಾರೆ.
ಮೆಸ್ಸಿ ತಂಡ ಅರ್ಜೆಂಟೀನಾ ಕಳಪೆ ಆರಂಭ ಮಾಡಿದ್ದು, ಐಸ್ಲೆಂಡ್ ವಿರುದ್ಧ 1-1ರಿಂದ ಡ್ರಾ ಮಾಡಿಕೊಂಡಿತ್ತು.

ನೈಜೀರಿಯಾ ವಿರುದ್ಧ ಮೆಸ್ಸಿ ಒಂದು ಗೋಲು ಬಾರಿಸಿದ ಬಳಿ ಕೊನೆಯ ಕ್ಷಣಗಳಲ್ಲಿ ಅರ್ಜೆಂಟೀನಾ ಇನ್ನೊಂದು ಗೋಲು ಹೊಡೆದು ನೈಜೀರಿಯಾ ವಿರುದ್ಧ 2-1ರಿಂದ ಗೆಲ್ಲುವ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು.  ಮೆಸ್ಸಿ ಪಂದ್ಯದ ಕೊನೆ ಕ್ಷಣಗಳಲ್ಲಿ ಕಾಲ ವ್ಯರ್ಥ ಮಾಡಿದ್ದಕ್ಕಾಗಿ ಹಳದಿ ಕಾರ್ಡ್ ಪಡೆದರು.

ಇಂದು ಆಡುವ ಪಂದ್ಯದಲ್ಲಿ ಯಾರೇ ಹಳದಿ ಕಾರ್ಡ್ ಪಡೆದರೂ ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ತಂಡ ಪ್ರವೇಶಿಸಿದರೆ ಅವರಿಗೆ ಆಡಲು ಅವಕಾಶವಿರುವುದಿಲ್ಲ.
ಇಂದಿನ ಪಂದ್ಯಗಳು
ಫ್ರಾನ್ಸ್ ವಿರುದ್ಧ ಅರ್ಜೆಂಟೀನ್ , ಕಜನ್ ಅರೇನಾ, ಕಜನ್- ಸಂಜೆ 7.30ಕ್ಕೆ.ಫ್ರಾನ್ಸ್ ಅರ್ಜೆಂಟೀನಾವನ್ನು ವಿಶ್ವ ಕಪ್ ಪಂದ್ಯದಲ್ಲಿ ಎಂದಿಗೂ ಗೆದ್ದಿಲ್ಲ. ಉರುಗ್ವೆ ವಿರುದ್ಧ ಪೋರ್ಚುಗಲ್ ಫಿಶ್ ಸ್ಟೇಡಿಯಂ ರಾತ್ರಿ 11.30ಕ್ಕೆ

Recent Comments

Leave Comments

footer
Top