• 16 October 2018 10:00
Jai Kannada
Jai Kannada
Blog single photo
June 25, 2018

ಸಂಜಯ್ ದತ್, 308 ಹುಡುಗಿಯರು-  "ಸಂಜು''  ಚಿತ್ರದಲ್ಲಿ ಎಲ್ಲಾ ಬಟಾಬಯಲು 

ಸಂಜಯ್ ದತ್ 308 ಹುಡುಗಿಯರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದು ಹೇಗೆ ಎಂದು ಕೇಳಿದರೆ ಎಂಥವರಿಗಾದರೂ ಶಾಕ್ ಆಗುತ್ತದೆ. ಅವನ ಬದುಕು ಎಲ್ಲರಂತಲ್ಲ. ಕೆದಕುತ್ತಾ ಹೋದಂತೆ ಅವನ ಬದುಕಿನ ರೋಚಕ  ಘಟನೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆರಂಭದ ವಿವಾಹದಲ್ಲಿ ಮೊದಲ ಪತ್ನಿ ರಿಚಾ ಶರ್ಮಾ ಬ್ರೇನ್ ಟ್ಯೂಮರ್‌ನಿಂದ ಮೃತಪಟ್ಟಳು. ಎರಡನೇ ಪತ್ನಿ ಮದುವೆ ಕೂಡ ವಿಚ್ಛೇದನದಲ್ಲಿ ಅಂತ್ಯಗೊಂಡಿತು.

ಕೆಲವು ಖ್ಯಾತ ನಟಿಯರ ಜತೆ ಸಂಜು ಅಫೇರ್ ಕೂಡ ಇತ್ತು. ಆದರೆ 308 ಸುಂದರಿಯರ ಜತೆ ಸಂಜು ಲವ್ವಿ ಡವ್ವಿ ಆಡಿರುವ ವಿಷಯ ಕೇಳಿದರೆ ಎಂಥವರೂ ಬೆಚ್ಚಿಬೀಳುತ್ತಾರೆ. ಪ್ರಥಮ ಚಿತ್ರ ರಾಖಿಯಲ್ಲಿ ಸಂಜಯ್ ದತ್ ಹುಡುಗಿಯರ ಮನ ಗೆದ್ದಿದ್ದರು.

ರಣಬೀರ್ ಕಪೂರ್ ನಟನೆಯ ಸಂಜಯ್ ದತ್ ಆತ್ಮಚರಿತ್ರೆಯ ಚಿತ್ರದ ಟ್ರೇಲರ್ ಬಿಡುಗಡೆಯಾದ ಮೇಲೆ ಸಂಜಯ್ ಜೀವನದ ಪೂರ್ವಚರಿತ್ರೆ ಎಲ್ಲರ ಬಾಯಿಗೆ ಆಹಾರವಾಗಿದೆ. ಈ ಟ್ರೇಲರ್‌ನಲ್ಲಿ ದತ್ ತನ್ನ ತಂದೆ, ತಾಯಿಯ ಜತೆ ಇರಿಸಿಕೊಂಡಿದ್ದ ಸಂಬಂಧ ಮತ್ತು ತಾನು ಡೇಟಿಂಗ್ ಮಾಡಿದ ಮಹಿಳೆಯರ ಬಗ್ಗೆ ಒಳನೋಟ ನೀಡುತ್ತದೆ. ಟ್ರೇಲರ್ ಒಂದು ದೃಶ್ಯದಲ್ಲಿ ತಾನು 308 ಯುವತಿಯರ ಜತೆ ಪ್ರೇಮದಾಟವಾಡಿದ್ದಾಗಿ ದತ್ ಬಾಯಿಬಿಟ್ಟಿದ್ದಾನೆ.

 ಖಳನಾಯಕ ನಟ ತನ್ನ ತಾಯಿ ನರ್ಗೀಸ್ ದತ್ ನಕಲಿ ಸಮಾಧಿಗೆ ಬಳಿಗೆ ಯುವತಿರನ್ನು ಒಯ್ದು ನನ್ನ ತಾಯಿಯನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಿದ್ದ. ಈ ಭೇಟಿಯ ಬಳಿಕ ಸಂಜು ಜತೆ ಯುವತಿ ಭಾವನಾತ್ಮಕ ಸಂಬಂಧ ಹೊಂದುತ್ತಿದ್ದಳು. ವಾಸ್ತವ ಸಂಗತಿ ಏನೆಂದರೆ ಆ ಸಮಾಧಿಯು ಸಂಜಯ್ ತಾಯಿಯದ್ದಾಗಿರಲಿಲ್ಲ.
 

Recent Comments

Leave Comments

footer
Top