• 24 October 2018 09:02
Jai Kannada
Jai Kannada
Blog single photo
June 24, 2018

ಜರ್ಮನಿಗೆ ಸ್ವೀಡನ್ ವಿರುದ್ಧ 2-1ರ ಜಯ:  ಪ್ರೀಕ್ವಾರ್ಟರ್ ಆಸೆ ಜೀವಂತ

ಜರ್ಮನಿಯ ಟೋನಿ ಕ್ರೂಸ್ ಅವರು ಫ್ರೀಕಿಕ್‌ನಲ್ಲಿ ಗೋಲು ಗಳಿಸುವ ಮೂಲಕ ಸ್ವೀಡನ್ ವಿರುದ್ಧ ಪಂದ್ಯದಲ್ಲಿ 2-1ರಿಂದ ಗೆಲುವು ಗಳಿಸಿ ಫೀಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಪ್ರೀ ಕ್ವಾರ್ಟರ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯ ಮುಗಿಯಲು ಕೆಲವೇ ಕ್ಷಣಗಳಿರುವಂತೆ ಜರ್ಮನಿಗೆ ಫ್ರೀ ಕಿಕ್ ಅವಕಾಶ ಸಿಕ್ಕಿದ್ದನ್ನು ಕ್ರೂಸ್ ಸದುಪಯೋಗ ಮಾಡಿಕೊಂಡು ಜಯ ತಂದಿತ್ತರು.

 ಮೆಕ್ಸಿಕೊ ವಿರುದ್ಧ ಪಂದ್ಯದಲ್ಲಿ ಸೋತಿದ್ದ ಜರ್ಮನಿ ಈ ಪಂದ್ಯದಲ್ಲೆ ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿತ್ತು. ಆರಂಭದಲ್ಲಿ ಸ್ವೀಡನ್ ತಂಡ ಮೇಲುಗೈ ಸಾಧಿಸಿ, ಓಲಾ ಟೈವೊನೆನ್ ಗೋಲು ಹೊಡೆದು ಸ್ವೀಡನ್ ಅಭಿಮಾನಿಗಳಲ್ಲಿ ಆಶಾಭಾವನೆ ಮೂಡಿಸಿದ್ದರು.

ಎಫ್ ಗ್ರೂಪ್‌ನಲ್ಲಿ ಮೆಕ್ಸಿಕೊ 2 ಜಯಗಳಿಂದ 6 ಪಾಯಿಂಟ್ ಗಳಿಸಿದ್ದರೆ, ಜರ್ಮನಿ ಮತ್ತು ಸ್ವೀಡನ್ ಒಂದು ಜಯ ಮತ್ತು ಒಂದು ಸೋಲಿನಿಂದ ತಲಾ 3 ಪಾಯಿಂಟ್ ಗಳಿಸಿದೆ. ದ.ಕೊರಿಯಾ ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಶೂನ್ಯ ಸಂಪಾದಿಸಿದೆ.

ವಿಡಿಯೊ ಕ್ಲಿಕ್ ಮಾಡಿ

 

Recent Comments

Leave Comments

footer
Top