• 18 October 2018 19:26
Jai Kannada
Jai Kannada
Blog single photo
June 11, 2018

ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಸಮಸ್ಯೆ 

ಪಾಲಘಾರ್/ಟೋಕಿಯೊ: ಜಪಾನ್ ಬೆಂಬಲಿತ 17 ಶತಕೋಟಿ ಡಾಲರ್ ಬುಲೆಟ್ ರೈಲು ಯೋಜನೆಯ ಕನಸು ಕಂಡಿದ್ದ ಭಾರತಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ಏಕೆಂದರೆ ಜಪಾನ್ ಪ್ರಾಯೋಜಿತ ಯೋಜನೆಗೆ ಹಣ್ಣು ಬೆಳೆಗಾರರು ಭೂಮಿ ಬಿಟ್ಟುಕೊಡದೆ ಪ್ರತಿಭಟಿಸುತ್ತಿರುವುದರಿಂದ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ವಿಳಂಬದ ಹಾದಿ ಹಿಡಿದಿದೆ.

ಜಪಾನ್ ಪ್ರಾಯೋಜಿತ ಯೋಜನೆಗೆ ಡಿಸೆಂಬರ್ ಗಡುವನ್ನು ಭಾರತಕ್ಕೆ ನೀಡಲಾಗಿದ್ದು, ಆ ಗಡುವನ್ನು ಭಾರತ ಮಿಸ್ ಮಾಡಿಕೊಳ್ಳುವಂತೆ ಕಾಣುತ್ತಿದೆ. ಪ್ರಧಾನಿ ಮೋದಿ ಕಚೇರಿ ವಾರ, ವಾರವೂ ಈ ಯೋಜನೆ ಕುರಿತು ನಿಗಾ ವಹಿಸಿದ್ದು, ಸಪೋಟ ಮತ್ತು ಮಾವಿನ ಬೆಳೆಗಾರರ ಜತೆ ತೀಕ್ಷ್ಣ ಮಾತುಕತೆ ಬಳಿಕ ಎಲ್ಲ ತೊಡಕು ನಿವಾರಿಸಿಕೊಳ್ಳುವುದಾಗಿ ಭಾರತದ ಅಧಿಕಾರಿಗಳು ಟೊಕಿಯೊಗೆ ಭರವಸೆ ನೀಡಿದ್ದಾರೆ.

ಇತ್ತೀಚಿನ ತಿಂಗಳಲ್ಲಿ 108 ಕಿಮೀ ವ್ಯಾಪ್ತಿಯ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕಿನ ಪ್ರತಿಭಟನೆಗಳು ಭುಗಿಲೆದ್ದಿವೆ. ಮುಂಬೈ-ಅಹ್ಮದಾಬಾದ್ ಸಂಪರ್ಕಿಸುವ 1ನೇ 5ರಷ್ಟು ಭೂಮಿಯನ್ನು ಇದು ವ್ಯಾಪಿಸಿದೆ. ಇಲ್ಲಿ ತೋಟ ಬೆಳೆಸಲು ಮೂರು ದಶಕಗಳ ಕಾಲ ನಾನು ಕಷ್ಟುಪಟ್ಟಿದ್ದೆ. ಈಗ ಜಾಗವನ್ನು ಬಿಟ್ಟುಕೊಡುವಂತೆ ಹೇಳುತ್ತಿದ್ದಾರೆ. ತನ್ನ ಇಬ್ಬರು ನಿರುದ್ಯೋಗಿ ಮಕ್ಕಳ ಪೈಕಿ ಒಬ್ಬರಿಗೆ ಉದ್ಯೋಗ ಕಲ್ಪಿಸಿದರೆ ಜಾಗ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

Recent Comments

Leave Comments

footer
Top