• 19 August 2018 23:08
Jai Kannada
Jai Kannada
Blog single photo
June 11, 2018

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರದಿರುವುದಕ್ಕೆ ಚಿದಂಬರಂ ಟೀಕೆ 

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಯಡಿ ತರದಿರುವ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

 ನೀವು ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ದರಗಳು ಕುಸಿಯುತ್ತವೆ. ಅನೇಕ ರಾಜ್ಯಗಳಲ್ಲಿ ಅವರದ್ದೇ ಸರ್ಕಾರವಿರುವುದರಿಂದ ಈ ಕೆಲಸ ಅವರಿಗೆ ಕಷ್ಟವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಆರ್ಥಿಕ ಸೂಚಕಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ಅವರು ಸರ್ಕಾರವನ್ನು ಟೀಕಿಸಿದರು. ಅಧಿಕ ಹಣದುಬ್ಬರವು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಅವರು ನುಡಿದರು.

ಹಣದುಬ್ಬರವು ಏರಿಕೆಯಾಗಿದೆ. ರೆಪೊ ದರಗಳನ್ನು ಕೆಲವು ದಿನಗಳ ಹಿಂದೆ ಏರಿಸಿದ್ದು ಇದಕ್ಕೆ ನಿದರ್ಶನವಾಗಿದೆ. ಬಡ್ಡಿದರಗಳು ಏರಿಕೆಯಾಗಿ ಗ್ರಾಹಕರು ಮತ್ತು ಉತ್ಪಾದಕರಿಗೆ ಹೊರೆಯಾಗುತ್ತದೆ ಎಂದು ಹೇಳಿದರು. ಬ್ಯಾಂಕಿಂಗ್ ವ್ಯವಸ್ಥೆ ದಿವಾಳಿಯಾಗುತ್ತಿದ್ದು, ಒಟ್ಟು ವಸೂಲಾಗದ ಸಾಲದ ಪ್ರಮಾಣವು 2.63, 015 ಕೋಟಿಗಳಿಂದ 10, 30,000 ಕೋಟಿಗೆ ಏರಿಕೆಯಾಗಿದೆ ಎಂದು ಟೀಕಿಸಿದರು.
 ಉದ್ಯೋಗಗಳ ಸೃಷ್ಟಿಯಲ್ಲಿ ಕೂಡ ದೇಶ ವಿಫಲವಾಗಿದೆ ಎಂದು ಚಿದಂಬರಂ ಟೀಕಿಸಿದರು.

Recent Comments

Leave Comments

footer
Top