• 18 November 2018 13:30
Jai Kannada
Jai Kannada
Blog single photo
December 15, 2017

ಹಾಯ್ ಬೆಂಗಳೂರ್‌ನಲ್ಲಿ  ಸುನಿಲ್ ಹೆಗ್ಗರವಳ್ಳಿ ವಿರುದ್ಧ ರವಿ ಬೆಳಗೆರೆ ಬರಹ 

ಬೆಂಗಳೂರು: ರವಿ ಬೆಳಗೆರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತುಕೊಂಡು ಸುನಿಲ್ ಹೆಗ್ಗರವಳ್ಳಿ ವಿರುದ್ಧ ಬರೆದ ಲೇಖನ ಈ ವಾರದ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿದೆ.

“ಶನಿ ಮುಖಿ ಕೊಲೆಗೆ ಸುಪಾರಿ ಒಂದು ಕೇಡು!” ಎನ್ನುವ ಹೆಡ್ಡಿಂಗ್ ಹಾಕಿ “ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್” ಎಂದು ಟ್ಯಾಗ್ ಲೈನ್ ಕೊಟ್ಟು ರವಿ ಬೆಳಗೆರೆ ಮುಖಪುಟದಲ್ಲೇ ಹೆಗ್ಗರವಳ್ಳಿ ವಿರುದ್ಧ ಲೇಖನಿ ಸಮರ ಸಾರಿದ್ದಾರೆ.

ರವಿ ಬೆಳಗೆರೆ ತಮ್ಮ ಬರಹದಲ್ಲಿ ಒಬ್ಬ ಸುಪಾರಿ ಹಂತಕ ಮತ್ತು ಪೊಲೀಸ್ ಅಧಿಕಾರಿ ಹೀಗೆ ನಾಲ್ಕೈದು ಜನ ಸೇರಿ ಹೆಣೆದ ಕಟ್ಟುಕಥೆ ಎಂದಿದ್ದಾರೆ. 15 ವರ್ಷ ನನ್ನ ಜತೆ ದುಡಿದೋನನ್ನು ಸುಪಾರಿ ಕೊಟ್ಟು ಕೊಲ್ಲಿಸಲೇ ಎಂದು ಪ್ರಶ್ನಿಸಿದ್ದಾರೆ.  ಸುನಿಲ್ ಹತ್ಯೆಗೆ ನಾನು 30 ಲಕ್ಷ ಸುಪಾರಿ ಕೊಟ್ಟೆನಂತೆ, ವಾಟ್ ಎ ಸ್ಟುಪಿಡ್ ಎಂದು ಹೇಳಿದ್ದಾರೆ.

ರವಿ ಬೆಳಗೆರೆ ತಮ್ಮ ಬರಹದ ಮೂಲಕ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.  ಸಾಫ್ಟ್ ಕಾರ್ನರ್ ಮತ್ತು ಖಾಸ್ ಬಾತ್‌ನಲ್ಲಿ ಸುನಿಲ್ ಹೆಗ್ಗರವಳ್ಳಿ ಕುರಿತು ಬೆಳಗೆರೆ ಈ ಬರಹ ಬರೆದಿದ್ದಾರೆ.

Recent Comments

Leave Comments

footer
Top