• 21 January 2018 04:29
Jai Kannada
Jai Kannada
Blog single photo
December 15, 2017

ಲ್ಯಾಬ್ ವರದಿ: ಗೌರಿ , ಕಲ್ಬುರ್ಗಿ, ಪನ್ಸಾರೆ ಹತ್ಯೆಯಾಗಿದ್ದು ಒಂದೇ ಪಿಸ್ತೂಲಿನಿಂದ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ ಪಿಸ್ತೂಲಿನಿಂದಲೇ ವಿದ್ವಾಂಸ ಎಂ.ಎಂ. ಕಲಬುರ್ಗಿ ಮತ್ತು ಕಮ್ಯೂನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರನ್ನು ಹತ್ಯೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಸ್ವತಂತ್ರ ಮತ್ತು ಮೂರನೇ ಪಾರ್ಟಿಯ ಶಸ್ತ್ರಾಸ್ತ್ರ ಪರಿಶೀಲನೆಯು ಇದನ್ನು ದೃಢಪಡಿಸಿದೆ. ಗೌರಿ ಲಂಕೇಶ್ ಹತ್ಯೆಗೆ 7.65 ಎಂಎಂ ಕಂಟ್ರಿ ಮೇಡ್ ಪಿಸ್ತೂಲು ಬಳಸಲಾಗಿತ್ತು. ಇದರಿಂದ ಈ ಮೂವರನ್ನು ಕೊಲೆ ಮಾಡಿದವರು ಒಂದೇ ಸಂಘಟನೆಗೆ ಸೇರಿದವರು ಅಥವಾ ಒಬ್ಬನೇ ವ್ಯಕ್ತಿಯ ಬಳಿಯಿದ್ದ ಪಿಸ್ತೂಲಿನಿಂದ ಈ ಮೂವರನ್ನು ಕೊಲೆ ಮಾಡಲಾಗಿದೆ.

  ಮೂರು ಹತ್ಯೆಗಳಲ್ಲಿ ಬಳಸಿದ ಗನ್ ಒಂದೇ ಆಗಿರುವುದಕ್ಕೆ 80% ಅವಕಾಶವಿದೆ ಎಂದು ಶಸ್ತ್ರಾಸ್ತ್ರ ತಜ್ಞರು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ದೃಢೀಕರಿಸಿದ್ದಾಗಿ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು. ಎಲ್ಲಾ ಮೂರು ಹತ್ಯೆಗೆ ಒಂದೇ ಪಿಸ್ತೂಲು ಬಳಸಲಾಗಿದೆ ಎಂದು ಎರಡು ರಾಜ್ಯಗಳ ವಿಧಿವಿಜ್ಞಾನ ಪ್ರಯೋಗಾಲಯ ದೃಢೀಕರಿಸಿದೆ.
ಎರಡು ಪ್ರಯೋಗಾಲಯಗಳ ದೃಢೀಕರಣದಿಂದ ಒಂದೇ ಶಸ್ತ್ರವನ್ನು ಮೂವರ ಹತ್ಯೆಗೆ ಬಳಸಿರುವುದು 100ಕ್ಕೆ 100 ದೃಢಪಟ್ಟಿದೆ ಎಂದು ಎಫ್ಎಸ್‌ಎಲ್ ಬೆಂಗಳೂರಿನ ಮೂಲಗಳು ತಿಳಿಸಿವೆ.

 ಶಸ್ತ್ರಾಸ್ತ್ರ ತಜ್ಞರ ಪ್ರಕಾರ, ಪಿಸ್ತೂಲಿನ ಟ್ರಿಗರ್ ಒತ್ತಿದಾಗ ಗುಂಡು ನಳಿಕೆಯ ಮೂಲಕ ಸಾಗುತ್ತದೆ. ಆ ಗುಂಡುಗಳ ಮೇಲೆ ನಳಿಕೆಯ ಒಳಭಾಗ ತನ್ನ ಕುರುಹನ್ನು ಉಳಿಸಿರುತ್ತದೆ. ಪನ್ಸಾರೆ, ಕಲಬುರ್ಗಿ ಮತ್ತು ಗೌರಿಯ ದೇಹಗಳಲ್ಲಿ ಹೊಕ್ಕ ಗುಂಡುಗಳನ್ನು ಪರಿಶೀಲನೆ ಮಾಡಿದಾಗ ಒಂದೇ ಪಿಸ್ತೂಲಿನಿಂದ ಆ ಗುಂಡು ಹಾರಿದ್ದು ಪತ್ತೆಯಾಗಿದೆ ಎಂದು ತಜ್ಞರೊಬ್ಬರು ತಿಳಿಸಿದರು.

Recent Comments

Leave Comments

footer
Top