• 18 November 2018 13:30
Jai Kannada
Jai Kannada
Blog single photo
December 15, 2017

ತ್ರಿವಳಿ ತಲಾಖ್ ನಿಷೇಧ ಕಾನೂನಿಗೆ ಸರ್ಕಾರ ಅಸ್ತು 

ನವದೆಹಲಿ: ಹೆಂಡತಿ ಮೇಲೆ ಸ್ವಲ್ಪ ಸಿಟ್ಟು ಬಂದಾಗಲೆಲ್ಲಾ, ಬೇರೆ ಹೆಣ್ಣನ್ನು ಮದುವೆಯಾಗಬೇಕೆನಿಸಿದಾಗ ತಲಾಖ್ ನೀಡುವ ಪದ್ಧತಿಗೆ ಈಗ ತೆರೆಬಿದ್ದಿದೆ. ದಿಢೀರ್ ತಲಾಖ್ ನೀಡುವ ಈ ಆಚರಣೆಗೆ ಬ್ರೇಕ್ ಹಾಕುವ ಕರಡು ಕಾನೂನಿಗೆ ಸರ್ಕಾರ ಶುಕ್ರವಾರ ಅನುಮೋದಿಸಿದೆ.

ತಲಾಖ್ ನೀಡುವುದು ಕಾನೂನುಬಾಹಿರವಾಗಿದ್ದು, ಪತಿ ಮೂರುವರ್ಷಗಳ ಜೈಲು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ಮುಸ್ಲಿ ಮಹಿಳಾ ಹಕ್ಕು ರಕ್ಷಣೆ ಕುರಿತ ಕರಡಿಗೆ ಕೇಂದ್ರ ಸಂಚಿವ ಸಂಪುಟ ಅನುಮೋದನೆ ನೀಡಿದೆ. ಈ ಕರಡನ್ನು  ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಆಂತರಿಕ ಸಚಿವರ ತಂಡ ಸಿದ್ಧಪಡಿಸಿದೆ. ಈ ತಂಡದಲ್ಲಿ ಸುಷ್ಣಾ ಸ್ವರಾಜ್, ಅರುಣ್ ಜೇಟ್ಲಿ, ರವಿ ಶಂಕರ್ ಪ್ರಸಾದ್ ಮತ್ತು ಪಿ.ಪಿ. ಚೌಧರಿ ಮುಂತಾದವರಿದ್ದರು.

 ದಿಢೀರ್ ತ್ರಿವಳಿ ತಲಾಖ್ ನೀಡಿದ ಸಂದರ್ಭದಲ್ಲಿ ಉದ್ದೇಶಿತ ಕಾನೂನು ಅನ್ವಯವಾಗಲಿದ್ದು, ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿ ಮಹಿಳೆಗೆ ಮತ್ತು ಮಹಿಳೆಯ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಜೀವನಾಂಶ ಕೋರಬಹುದು.

Recent Comments

Leave Comments

footer
Top