• 16 October 2018 16:03
Jai Kannada
Jai Kannada
Blog single photo
June 02, 2018

ಇವಿಎಂಗಳ ಮೇಲೆ ಲೋಬೊಗೆ ಅನುಮಾನ: ಹೈಕೋರ್ಟ್ ಮೊರೆ 

ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಇವಿಎಂಗಳು ಕಾರಣವಿರಬಹುದೆಂದು ಎಂಬ ಅನುಮಾನದ ಪಿಶಾಚಿ ಕಾಡುತ್ತಿದೆ. ಆದರೆ ಪ್ರತಿ ಬಾರಿಯೂ ಇವಿಎಂಗಳ ಮೇಲೆ ಸೋಲಿನ ಹೊಣೆ ಹೊರಿಸಿದರೆ ನಗೆಪಾಟಲಿಗೆ ಗುರಿಯಾಗಬಹುದು ಎಂಬ ಭಯದಿಂದ ಕಾಂಗ್ರೆಸ್ ಸೋಲನ್ನು ನುಂಗಿಕೊಂಡು ಕೂತಿದೆ.

ಆದರೆ ಮಂಗಳೂರು ದಕ್ಷಿಣದ ಮಾಜಿ ಶಾಸಕ ಜೆ.ಆರ್. ಲೋಬೊ ಅವರಿಗೆ ಮಾತ್ರ ತಮ್ಮ ಸೋಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಎದುರಾಳಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರಿಂದ ಸೋಲಪ್ಪಿದ ಲೋಬೊ ಇವಿಎಂ ಮತ್ತು ವಿವಿಪ್ಯಾಟ್‌ಗಳ ದೋಷವೇ ತಮ್ಮ ಸೋಲಿಗೆ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಒಂದು ವಾರದಲ್ಲಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಲೋಬೊ ವಾದವೆಂದರೆ ಹಳೇ ಗಂಡನ ಪಾದವೇ ಗತಿ ಎಂದು ಚುನಾವಣೆ ಆಯೋಗ ಇವಿಎಂ ಬಳಕೆ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಬೇಕೆಂಬುದಾಗಿದೆ.

ದಕ್ಷಿಣ ಕನ್ನಡದಲ್ಲಿ ಚುನಾವಣೆ ಫಲಿತಾಂಶ ಸಂಪೂರ್ಣ ಅನಿರೀಕ್ಷಿತ. ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ನನಗೆ ಅನುಮಾನ ಮೂಡಿದೆ. ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಬೂತ್ ಮಟ್ಟದಲ್ಲಿ ನನ್ನ ಸೋಲಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆಂದು ಲೊಬೊ ತಿಳಿಸಿದರು.
ಅರ್ಜಿಯಲ್ಲಿ, ಎಲ್ಲಾ ಇವಿಎಂಗಳ ವೋಟ್ ಮತ್ತು ವಿವಿಪ್ಯಾಟ್ ಪೆಟ್ಟಿಗಗಳ ಸ್ಲಿಪ್‌ಗಳನ್ನು ಮರುಎಣಿಕೆ ಮಾಡಬೇಕು ಎಂದು ಲೋಬೊ ಒತ್ತಾಯಿಸಿದ್ದಾರೆ.
 

Recent Comments

Leave Comments

footer
Top