• 18 November 2018 14:25
Jai Kannada
Jai Kannada
Blog single photo
December 15, 2017

ಸೋಲುವ ಭಯದಲ್ಲಿ ಹತಾಶರಾದ ಬಿಜೆಪಿ: ಸಿಎಂ ಛಾಟಿ 

ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಸೋಲುವ ಭಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಏನೂ ಗೊತ್ತಿಲ್ಲದೇ ಹೀಗೆ ಹತಾಶರಾಗಿ ಮಾತನಾಡುವುದು ಏಕೆ ಎಂದು ಸಿಎಂ ಪ್ರಶ್ನಿಸಿದರು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ತನಿಖೆಯ ವರದಿ ಬಂದ ಬಳಿಕ ಸಾವಿನಲ್ಲಿ ಯಾರು ಭಾಗಿಯಾಗಿದ್ದಾರೆಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಆದರೆ ತನಿಖೆಯ ವರದಿ ಬರುವುದಕ್ಕೆ ಮುಂಚಿತವಾಗಿ  ಕೇವಲ ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಿಎಂ ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಜತೆ ಹಂಚಿಕೊಂಡರು.
 ಪರೇಶ್ ಮೇಸ್ತ ಸಾವನ್ನು ಒಂದು ಕೋಮಿನ ಜನರಿಂದ ನಡೆದ ಹತ್ಯೆ ಎಂದು ಬಿಜೆಪಿ ವಾದಿಸುತ್ತಿದ್ದು, ಈ ಹತ್ಯೆಯನ್ನು ಖಂಡಿಸಿ ಕುಮಟಾ, ಶಿರಸಿ ಮುಂತಾದ ಕಡೆ  ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರಿಂದ ಹಿಂಸಾಚಾರಕ್ಕೆ ಎಡೆಯಾಗಿತ್ತು.

Recent Comments

Leave Comments

footer
Top