• 19 August 2018 05:13
Jai Kannada
Jai Kannada
Blog single photo
December 14, 2017

ಸಾವಿನಲ್ಲೂ ಸಾರ್ಥಕತೆ : ಅಂಗಾಂಗ ದಾನ ಮಾಡಿದ ಮಹಿಳೆಯ ಬಂಧುಗಳು

ಮಂಗಳೂರು: ಕುಂದಾಪುರದ ಕೋಟದಲ್ಲಿ ಸಂಭವಿಸಿದ ಅಪಘಾತದಲ್ಲಿ ಈ ಮಹಿಳೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು.

ಇದರಿಂದ ಮಹಿಳೆಯ ಸೋದರರು ಮಹಿಳೆಯ ಅಂಗಾಂಗ ದಾನ ಮಾಡಲು ನಿರ್ಧರಿಸುವ ಮೂಲಕ ತಮ್ಮ ನಿಕಟ ಬಂಧುವಿನ  ಸಾವಿನಲ್ಲೂ ಸಾರ್ಥಕತೆ ಮೆರೆದರು.

 ಎರಡು ದಿನಗಳ ಹಿಂದೆ ಕೋಟದಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಇದರ ಪರಿಣಾಮವಾಗಿ ಸ್ಥಳದಲ್ಲೇ ತಾಯಿ-ಮಗ ಅಸುನೀಗಿದ್ದರು. ಇವರ ಜತೆಗೆ ಭಾಸ್ಕರ್ ಮತ್ತು ಕಸ್ತೂರಿ ಎಂಬವರು ಅಪಘಾತದಲ್ಲಿ ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು.

 ಆದರೆ ಕಸ್ತೂರಿ ಎಂಬವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ದೃಢಪಡಿಸಿದ ಬಳಿಕ ಸಾವಿನ ಹಂತದಲ್ಲಿರುವ ತಮ್ಮ ಸೋದರಿ ಸಾವಿನಲ್ಲೂ ಇನ್ನೊಬ್ಬರ ಪ್ರಾಣ ರಕ್ಷಣೆಗೆ ನೆರವಾಗಬೇಕೆಂದು ತೀರ್ಮಾನಿಸಿ ಸೋದರಿಯ ಅಂಗಾಂಗ ದಾನ ಮಾಡುವ ನಿರ್ಧಾರವನ್ನು ವೈದ್ಯರಿಗೆ ತಿಳಿಸಿದರು. ಕೆಎಂಸಿ ವೈದ್ಯರು ಬೆಂಗಳೂರಿನ ವೈದ್ಯರನ್ನು ಸಂಪರ್ಕಿಸಿ,  ಇಂದು ಬೆಳಗ್ಗೆ ಎಂಟು ಗಂಟೆಗೆ ಎರಡು ಕಿಡ್ನಿ, ಕಣ್ಣುಗಳು, ಯಕೃತ್, ಹೃದಯ ಕವಾಟವನ್ನು ದಾನ ಪಡೆದು, ಅಂಗಾಂಗಗಳ ತುರ್ತು ಅಗತ್ಯವಿರುವ ವಿವಿಧ ಆಸ್ಪತ್ರೆಗಳಿಗೆ ಇವನ್ನು ರವಾನಿಸಿದ್ದಾರೆ. ಮಣಿಪಾಲ ಕೆಎಂಸಿಯ ಇಬ್ಬರು ರೋಗಿಗಳಿಗೆ ಎರಡು ಕಣ್ಣುಗಳು ಮತ್ತು ಒಬ್ಬರಿಗೆ ಕಿಡ್ನಿಯನ್ನು ಅಳವಡಿಸಲಾಗುವುದು ಎಂದು ಕೆಎಂಸಿ ಮೆಡಿಕಲ್ ಅಧಿಕಾರಿ ಮಾಹಿತಿ ನೀಡಿದರು.
 ತೀವ್ರ ದುಃಖದ ನಡುವೆ ಅಂಗಾಂಗ ದಾನ ಮಾಡಲು ನಿರ್ಧರಿಸಿದ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


 

Recent Comments

Leave Comments

footer
Top