ಮಿಯಾಮಿ: ನಮ್ಮ ಸೌರ ಮಂಡಲದ ರೀತಿಯಲ್ಲೇ ಇರುವ ಇನ್ನೊಂದು ಸೌರ ಮಂಡಲವನ್ನು ನಾಸಾದ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪತ್ತೆ ಹಚ್ಚಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
8 ಗ್ರಹಗಳ ಸೌರ ವ್ಯವಸ್ಥೆಯಲ್ಲಿ 2, 524 ಬೆಳಕಿನ ವರ್ಷಗಳ ದೂರದಲ್ಲಿ ಕೆಪ್ಲರ್ 90 ಎಂಬ ನಕ್ಷತ್ರದ ಸುತ್ತ ಗ್ರಹಗಳು ಪರಿಭ್ರಮಣೆ ಮಾಡುತ್ತಿವೆ.
ಕೆಪ್ಲರ್ -90 ವ್ಯವಸ್ಥೆ ಸೌರ ಮಂಡಲದ ಮಿನಿ ಸ್ವರೂಪದಂತಿದೆ ಎಂದು ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಖಗೋಳತಜ್ಞ ಆಂಡ್ರಿವ್ ವಾಂಡರ್ ಬರ್ಗ್ ಹೇಳಿದ್ದಾರೆ.
ಹೊಸದಾಗಿ ಪತ್ತೆಹಚ್ಚಲಾದ ಗ್ರಹ ಕೆಪ್ಲಪ್-90ಐ ಭೂಮಿಯ ರೀತಿ ಕಲ್ಲಿನಿಂದ ಕೂಡಿದ ಗ್ರಹವಾಗಿದ್ದು, 14.4 ದಿನಗಳಿಗೊಮ್ಮೆ ತನ್ನ ನಕ್ಷತ್ರದ ಸುತ್ತ ಪರಿಭ್ರಮಿಸುತ್ತದೆ. ಅಲ್ಲಿನ ಒಂದು ವರ್ಷವು ಭೂಮಿಯ ಮೇಲೆ ಎರಡು ವಾರಗಳಿಗೆ ಸಮನಾಗಿರುತ್ತದೆ.
ಆದರೆ ಕೆಪ್ಲರ್- 90ಐ ಮೇಲ್ಮೈ ಕಾದ ಕೆಂಡದಂತಿದ್ದು, ನಾನು ಅಲ್ಲಿಗೆ ಹೋಗಬೇಕೆಂದು ಇಚ್ಛಿಸುವುದಿಲ್ಲ ಎಂದು ವಾಂಡರ್ಬರ್ಗ್ ಹೇಳಿದರು.
ಆ ಗ್ರಹದ ಸರಾಸರಿ ಉಷ್ಣಾಂಶವು 800 ಡಿಗ್ರಿ ಫ್ಯಾರನ್ಹೀಟ್ (426 ಡಿಗ್ರಿ ಸೆಲ್ಸಿಯಸ್) ಸೂರ್ಯನಿಗೆ ಅತೀ ಸಮೀಪದ ಗ್ರಹ ಬುಧನಷ್ಟೇ ಉಷ್ಣಾಂಶ ಹೊಂದಿದೆ.
ನಾಸಾದ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ನಿಂದ ಸಂಗ್ರಹಿಸಿದ 35,000 ಗ್ರಹಗಳ ಸಂಕೇತಗಳನ್ನು ಸ್ಕ್ಯಾನ್ ಮಾಡಿ ಗ್ರಹಗಳ ಪರಿಭ್ರಮಣೆಯನ್ನು ಶೋಧಿಸುವಂತೆ ಕಂಪ್ಯೂಟರ್ವೊಂದಕ್ಕೆ ಭೋದಿಸುವುದು ಪ್ರಕ್ರಿಯೆಯಲ್ಲಿ ಒಳಗೊಂಡಿತ್ತು.
ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ 2009ರಲ್ಲಿ ಸ್ಥಾಪಿಸಲಾಗಿದ್ದು, 150000 ನಕ್ಷತ್ರಗಳನ್ನು ಇದುವರೆಗೆ ಸ್ಕ್ಯಾನ್ ಮಾಡಿದೆ.
Recent Comments