• 18 November 2018 14:04
Jai Kannada
Jai Kannada
Blog single photo
December 14, 2017

ಸಿ ವೋಟರ್ ಸಮೀಕ್ಷೆ - ಗುಜರಾತ್, ಹಿಮಾಚಲ ಬಿಜೆಪಿ ಗೆಲುವು

ನವದೆಹಲಿ: ಟೈಮ್ಸ್ ಆಫ್ ಇಂಡಿಯಾ ಆನ್‌ಲೈನ್ -ಸಿ ಓಟರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಗುಜರಾತಿನಲ್ಲಿ ಬಿಜೆಪಿ ಐದನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯ 2ನೇ ಹಂತದ 2 ಗಂಟೆವರೆಗಿನ ಮತದಾನ ಆಧರಿಸಿ ಸಿ ಓಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 108 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದದು, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು 74 ಸೀಟುಗಳಿಗೆ ತೃಪ್ತಿಪಡಬೇಕಾಗಿದೆ.

 ಆದರೆ ವೋಟ್ ಹಂಚಿಕೆ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದೆ ಕಾಂಗ್ರೆಸ್ ತನ್ನ ಸಾಧನೆಯನ್ನು ಸುಧಾರಿಸಿಕೊಳ್ಳುವ ನಿರೀಕ್ಷೆಯಿದೆ. ಬಿಜೆಪಿ ಕಳೆದ ಬಾರಿ 115 ಸೀಟು ಗೆದ್ದಿದ್ದರೆ ಈ ಬಾರಿ 108 ಸೀಟು ಗೆದ್ದು ನಿರಾಯಾಸವಾಗಿ ಬಹುಮತದ ಸಂಖ್ಯೆ 94ನ್ನು ದಾಟಲಿದೆ. ಬಿಜೆಪಿಯ ನಷ್ಟವು ಕಾಂಗ್ರೆಸ್‌ಗೆ ಲಾಭವಾಗಿದ್ದು, ಪ್ರಸಕ್ತ 61 ಸೀಟುಗಳಿಗೆ ಇನ್ನೂ 13 ಸೀಟುಗಳನ್ನು ಕಾಂಗ್ರೆಸ್ ಸೇರಿಸಿಕೊಳ್ಳಲಿದೆ.

 ಗುಜರಾತಿನಲ್ಲಿ ತಾವೇ ಗೆಲ್ಲುತ್ತೇವೆಂದು ಬೀಗುತ್ತಿದ್ದ ಕಾಂಗ್ರೆಸ್‌ಗೆ ಈ ಚುನಾವಣೋತ್ತರ ಸಮೀಕ್ಷೆ ನಿರಾಶಾದಾಯಕವಾಗಿದೆ. ಮೋದಿ ಅವರ ಜನಪ್ರಿಯತೆ ಕುಂದಿಲ್ಲ ಎನ್ನುವುದು ಗುಜರಾತ್ ಸಮೀಕ್ಷೆ ಜಾಹೀರು ಮಾಡಿದೆ.

ಹಿಮಾಚಲ ಪ್ರದೇಶದಲ್ಲಿ ಕೂಡ ಬಿಜೆಪಿ 41 ಸ್ಥಾನಗಳನ್ನು ಗೆಲ್ಲಲಿದ್ದು, ತನ್ನ ವೋಟ್ ಶೇರ್ ಹೆಚ್ಚಿಸಿಕೊಳ್ಳಲಿದೆ ಎಂದು ಸಿ ಓಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.
 ಆಡಳಿತಾರೂಢ ಕಾಂಗ್ರೆಸ್ ಅಸೆಂಬ್ಲಿಯಲ್ಲಿ 25 ಸೀಟುಗಳಿಗೆ ಕುಸಿಯಲಿದೆ. ಎಕ್ಸಿಟ್ ಪೋಲ್ ಭವಿಷ್ಯವು ಬಿಜೆಪಿಗೆ ರಾಜ್ಯದಲ್ಲಿ ಗಮನಾರ್ಹ ಲಾಭವಾಗುತ್ತೆಂದು ಭವಿಷ್ಯ ನುಡಿದಿದೆ. ಪ್ರಸಕ್ತ ಅಸೆಂಬ್ಲಿಯಲ್ಲಿ 26 ಸೀಟು ಹೊಂದಿರುವ ಬಿಜೆಪಿ ಇನ್ನೂ 15 ಸೀಟು ಗೆಲ್ಲಲಿದೆ. ಚುನಾವಣೋತ್ತರ ಸಮೀಕ್ಷೆ ನಿಜವಾದರೆ, ಬಿಜೆಪಿ ಮ್ಯಾಜಿಕ್ ನಂಬರ್‌ಗಿಂತ 6 ಹೆಚ್ಚು ಸೀಟು ಗಳಿಸಲಿದ್ದು, ಅಧಿಕಾರದ ಗದ್ದುಗೆಗೆ ಏರಲಿದೆ.

Recent Comments

Leave Comments

footer
Top