ನವದೆಹಲಿ: ಪೆಟ್ರೋಲ್ ದರ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ ಲೀ. 76.57 ಮತ್ತು 84.40 ರೂ.ಗೆ ತಲುಪಿ ಹೊಸ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಶನಿವಾರ ಪೆಟ್ರೋಲ್ ದರ 2013ರಿಂದೀಚೆಗೆ ಸಾರ್ವಕಾಲಿಕ ಏರಿಕೆಯ ಮಟ್ಟ ಮುಟ್ಟಿತ್ತು. ಭಾನುವಾರ ಹಿಂದಿನ ದಿನದ ದಾಖಲೆ ಮುರಿದಿತ್ತು. ಸೋಮವಾರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ.
ತೈಲ ರಫ್ತುದಾರರಿಂದ ಉತ್ಪಾದನೆ ಕುಂಠಿತ, ವೆನೆಜುಯೆಲಾದಿಂದ ಪೂರೈಕೆ ಕುಸಿತ ಮತ್ತು ಇರಾನ್ ಪೆಟ್ರೋಲ್ ಪೂರೈಕೆ ಬಗ್ಗೆ ಮೂಡಿದ ಅನಿಶ್ಚಿತತೆ ಇವೆಲ್ಲವೂ ಕಚ್ಚಾ ತೈಲದ ಬೆಲೆ ಏರುವಂತೆ ಮಾಡಿದೆ.
ಸರ್ಕಾರ ಕಚ್ಚಾ ತೈಲದ ಬೆಲೆ ಏರಿಕೆಯೇ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಾರಣವೆಂದು ಗೂಬೆ ಕೂರಿಸಬಹುದು. ಆದರೆ 5 ವರ್ಷಗಳ ಹಿಂದೆ ಪೆಟ್ರೋಲ್ ದರ ಲೀ. 76 ರೂ. ಮುಟ್ಟಿದಾಗ ತೆರಿಗೆಗಳಿಗಿಂತ ಮುಂಚೆ ಅದು ಶೇ. 40ರಷ್ಟು ದುಬಾರಿಯಾಗಿತ್ತು. ಈಗ ಅಧಿಕ ತೆರಿಗೆಗಳ ಕಾರಣದಿಂದ ಇಂಧನ ದರಗಳು ಏರಿಕೆಯಾಗಿದ್ದವು. ಡೀಸೆಲ್ ಮೇಲಿನ ಕೇಂದ್ರೀಯ ತೆರಿಗೆ ಮೂರು ಪಟ್ಟು ಹೆಚ್ಚಿದ್ದು ಪೆಟ್ರೋಲ್ ಮೇಲೆ ಎರಡು ಪಟ್ಟು ಹೆಚ್ಚಾಗಿದೆ.
Recent Comments