• 20 October 2018 03:28
Jai Kannada
Jai Kannada
Blog single photo
May 21, 2018

ನಿಪಾಹ್ ವೈರಸ್‌ನಿಂದ ಸಾವಿನ ಸಂಖ್ಯೆ ಏರಿಕೆ: ಕೇರಳಿಗರಲ್ಲಿ ಆತಂಕ 

ಬೆಂಗಳೂರು: ನಿಪಾಹ್ ವೈರಸ್ ಸೋಂಕಿನಿಂದ ಕೇರಳದ ಕೋಳಿಕ್ಕೋಡ್‌ನಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರುತ್ತಿದ್ದಂತೆ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಆ ಜಿಲ್ಲೆಗೆ ಸೇರಿದ ಕೇರಳಿಗರಲ್ಲಿ ಆತಂಕ ಷುರುವಾಗಿದೆ.

ಕೋಳಿಕ್ಕೋಡ್‌ಗೆ ಪ್ರಯಾಣವನ್ನು ತಪ್ಪಿಸಲು ತಕ್ಷಣದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನಿಂದ ಕೇರಳಕ್ಕೆ ಪ್ರವಾಸ ಹೋದವರು ನೆಲದ ಮೇಲೆ ಬಿದ್ದಿರುವ ಹಣ್ಣುಗಳನ್ನು ತಿನ್ನದಂತೆ ಮತ್ತು ಹಸಿ ಖರ್ಜೂರದ ಮರದಿಂದ ತೆಗೆಯುವ ರಸ ಕುಡಿಯದಂತೆ ಎಚ್ಚರಿಸಲಾಗಿದೆ.

ನಿಪಾಹ್ ವೈರಸ್ಸನ್ನು ಆರಂಭದಲ್ಲಿ ಮಲೇಷ್ಯಾ ಮತ್ತು ಸಿಂಗಪುರದ ಹಂದಿ ಸಾಕಣೆ ರೈತರಲ್ಲಿ ಎನ್ಸಿಫಿಲಾಟಿಸ್(ಮೆದುಳಿನ ಉರಿಯೂತ) ಮತ್ತು ಉಸಿರಾಟದ ಸಮಸ್ಯೆ ಹೊಮ್ಮಿದಾಗ ಗುರುತಿಸಲಾಯಿತು. .ಹಂದಿ ಸಾಕಣೆ ರೈತರು ಮೆದುಳಿನ ಉರಿಯೂತದಿಂದ ಕಾಯಿಲೆ ಬೀಳುತ್ತಿದ್ದ ಸುಂಗೈ ನಿಫಾ ಎಂಬ ಗ್ರಾಮದದಿಂದ ಈ ಹೆಸರು ಹುಟ್ಟಿಕೊಂಡಿದೆ. ಅದೇ ವರ್ಷ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು.
.
.

Recent Comments

Leave Comments

footer
Top