• 19 August 2018 05:13
Jai Kannada
Jai Kannada
Blog single photo
December 13, 2017

ಅಲೆಗಳ ದಾಳಿಯಿಂದ ಬಚಾವಾದ ಅದೃಷ್ಟಶಾಲಿ ಮಹಿಳೆ, ನಾಯಿ

ಲಂಡನ್: ಇದ್ದಕ್ಕಿದ್ದಂತೆ ಅಲೆಗಳ ದಾಳಿಯಿಂದ ಕೊಚ್ಚಿಹೋದ ಸಾಕುನಾಯಿಯನ್ನು ರಕ್ಷಿಸಿಕೊಳ್ಳಲು ನಾಯಿಯ ಯಜಮಾನಿ ಅಬ್ಬರಿಸಿ ಬರುತ್ತಿದ್ದ ಅಲೆಗಳ ನಡುವೆ ಧುಮುಕಿ ಸಾವಿನ ದವಡೆಯಿಂದ ಪಾರಾದ ಘಟನೆ ಲಂಡನ್‌ನಲ್ಲಿ ಸಂಭವಿಸಿದೆ.

ಲಂಡನ್ ಪ್ಯಾಲೇಸ್ ಪೈರ್ ಬಳಿ ಭಾನುವಾರ ಸಾಕುನಾಯಿ ಮಾಲೀಕೆಯ ಕೈಯಿಂದ ಬಿಡಿಸಿಕೊಂಡು ಅಲೆಗಳತ್ತ ಓಡಿತ್ತು. ನಾಯಿಯನ್ನು ರಕ್ಷಿಸಲು ಅದರ ಬೆನ್ನ ಹಿಂದೆ ಓಡಿದ ಮಹಿಳೆಯತ್ತ ಅಬ್ಬರಿಸಿದ ಅಲೆಗಳು ನುಗ್ಗಿ ಅವಳನ್ನು ದಡಕ್ಕೆ ತಂದು ನೂಕಿತ್ತು.  ನಾಯಿ ಕೂಡ ಅಲೆಗಳ ಹೊಡೆತದಿಂದ ದಡಕ್ಕೆ ಬಂದು ಬಿದ್ದಿತ್ತು. 

ವಿಡಿಯೊ ಚಿತ್ರೀಕರಿಸಿದ ದಾರಿಹೋಕನೊಬ್ಬ ಯುವತಿಯನ್ನು ಕೆಳಕ್ಕೆ ಕೆಡವಿದ ಬೃಹತ್ ಅಲೆಗಳು  ದಡ್ಡಕ್ಕೆ ತಂದು ಎಸೆದವು.ಅದೃಷ್ಟವಶಾತ್ ಮತ್ತೆ ಅವಳನ್ನು ಸಮುದ್ರಕ್ಕೆ ಎಳೆದುಕೊಂಡು ಹೋಗಿದ್ದರೆ ಅವಳ ಜೀವ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ವಿಡಿಯೊ ಕ್ಲಿಕ್ ಮಾಡಿ 

Recent Comments

Leave Comments

footer
Top