• 18 October 2018 19:58
Jai Kannada
Jai Kannada
Blog single photo
May 14, 2018

ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ನವದೆಹಲಿ: ಏಪ್ರಿಲ್ 24ರ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ದರ ಏರಿಕೆ ಮಾಡಿರಲಿಲ್ಲ. ಆದರೆ ಈಗ ಚುನಾವಣೆ ಮುಕ್ತಾಯವಾಗಿದ್ದು, ಬೆಲೆ ಏರಿಕೆ ಮಾಡಲು ಯಾವುದೇ ಅಡ್ಡಿಯಿಲ್ಲದೇ ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 17 ಪೈಸೆ ಮತ್ತು 21 ಪೈಸೆ ಹೆಚ್ಚಿಸಲಾಗಿದೆ. 

 ಪೆಟ್ರೋಲ್ , ಡೀಸಲ್ ದರ ಹೆಚ್ಚಳದಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 74.80 ರೂ. ಮುಟ್ಟಿದೆ ಮತ್ತು ಡೀಸೆಲ್ ಜದರ 66.17 ರೂ.ಗೆ ಮುಟ್ಟಿದೆ. ಅಂತಾರಾಷ್ಟ್ರೀಯ ಕಾರಣಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸಮರ್ಥಿಸಿಕೊಂಡಿದ್ದಾರೆ.

Recent Comments

Leave Comments

footer
Top