• 19 August 2018 05:10
Jai Kannada
Jai Kannada
Blog single photo
December 12, 2017

ಹ್ಯಾಪಿ ಬರ್ತ್ ಡೇ ರಜನಿಕಾಂತ್, ಸೂಪರ್ ಸ್ಟಾರ್ ಕುರಿತ ಸತ್ಯಾಂಶಗಳು 

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ 1950ರ ಡಿಸೆಂಬರ್ 12ರಂದು ಕರ್ನಾಟಕದ ಮರಾಠ ಕುಟುಂಬದಲ್ಲಿ ಜನಿಸಿದರು. ಇಂದಿಗೆ ಅವರು ತಮ್ಮ 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕೇವಲ ಬಸ್ ಕಂಡಕ್ಟರ್ ಹುದ್ದೆಯಲ್ಲಿ ಆರಂಭಿಸಿ ಅತ್ಯಧಿಕ ಸಂಭಾವನೆಯ ಚಿತ್ರ ನಟನಾಗಿ ಬೆಳೆದುಬಂದ ರಜನಿಕಾಂತ್ ಪ್ರಯಾಣವು ಸ್ಫೂರ್ತಿಗೆ ಮೂಲವಾಗಿದೆ.

ಅವರ ಪಾತ್ರಗಳಲ್ಲಿ ಅಮೋಘ ಅಭಿನಯ ಚಾತುರ್ಯಕ್ಕೆ ಮತ್ತು ಅಸಾಮಾನ್ಯ ನಡವಳಿಕೆಗಾಗಿ ಹಾಗೂ ನಿಜಜೀವನದಲ್ಲಿ ಅವರ ಸರಳತೆಗಾಗಿ ಜಗತ್ತಿನಾದ್ಯಂತ ಅವರಿಗೆ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿದೆ. ಅವರನ್ನು ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು ಕೆಳಗಿವೆ.
1. ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್‌ವಾಡ್. ಅವರು ಮರಾಠಿ ಮತ್ತು ಕನ್ನಡವನ್ನು ಜತೆಜತೆಯಾಗಿ ಮಾತನಾಡುತ್ತಾ ಬೆಳೆದರು.
2. ಚಿತ್ರರಂಗಕ್ಕೆ ಪ್ರವೇಶಿಸುವ ಮುಂಚೆ ಅವರ ಜೀವನ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಅವರು ಕೂಲಿ, ಬಡಗಿ ಮತ್ತು ಬಸ್ ನಿರ್ವಾಹಕ ಮುಂತಾದ ವೃತ್ತಿಗಳನ್ನು ನಡೆಸಿದ್ದಾರೆ.
3.ರಜನಿಕಾಂತ್ ಮದ್ರಾಸ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ಡಿಪ್ಲೋಮಾ ಮಾಡಿ ತಮಿಳನ್ನು ಕೂಡ ಕಲಿತರು.
4. ಲಂತಾ ರಂಗಾಚಾರಿ ರಜನಿಕಾಂತ್ ಪತ್ನಿಯಾಗಿದ್ದು, ಕಾಲೇಜು ಮ್ಯಾಗಜಿನ್‌ಗೆ ಸಂದರ್ಶನ ಮಾಡಲು ಲತಾ ಬಂದಿದ್ದಾಗ ಪರಸ್ಪರ ಭೇಟಿಯಾಗಿದ್ದರು. ಲತಾ ಚೆನ್ನೈ ಮೂಲದ ಶಾಲೆ ಆಶ್ರಮ್ ನಡೆಸುತ್ತಿದ್ದು, ದಂಪತಿಗೆ ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.
5. ರಜನಿ ವೃತ್ತಿಜೀವನದ ಮೊದಲ ವರ್ಷದಲ್ಲಿ, ಅವರಿಗೆ ಕೇವಲ ನೆಗೆಟಿವ್ ಪಾತ್ರಗಳು ಮಾತ್ರ ಸಿಕ್ಕಿತ್ತು. ರೇಪಿಸ್ಟ್,  ಲಂಪಟ, ಪೋರ್ನೋಗ್ರಾಫರ್ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದರು.
ಆದರೆ 1977ರಲ್ಲಿ ಅವರು ಭುವನ ಒರು ಕೆಲ್ವಿಕ್ಕುರಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

6. ಆಗಿನಿಂದ ಹಿಂತಿರುಗಿ ನೋಡದ ರಜನಿ ಅನೇಕ ಚಿತ್ರಗಳಲ್ಲಿ ತಮ್ಮ ನಟನಾ ಚಾತುರ್ಯದಿಂದ ಭೇಷ್ ಎನಿಸಿಕೊಂಡರು. ದೀವಾರ್, ಅಮರ್ ಅಕ್ಬರ್ ಅಂತೋನಿ, ಲಾವಾರಿಸ್ , ಡಾನ್ ಮುಂತಾದ ಅಮಿತಾಬ್ ಚಿತ್ರಗಳ ರೀಮೇಕ್‌ನಲ್ಲಿ ಕೂಡ ತಮ್ಮ ನಟನಾ ಕೌಶಲ್ಯ ತೋರಿಸಿದರು.

7. ರಜನಿ ಕಾಂತ್ ತಮ್ಮ ಬ್ಲಾಕ್ ಬಸ್ಟರ್ ಚಿತ್ರ ಶಿವಾಜಿ ಅಭಿನಯಕ್ಕೆ 2007ರಲ್ಲಿ 26 ಕೋಟಿ ಸಂಭಾವನೆ ಪಡೆದಿದ್ದರು. ಇದರಿಂದ ಜಾಕಿ ಚಾನ್ ಬಳಿಕ ಏಷ್ಯಾದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
 

Recent Comments

Leave Comments

footer
Top