• 20 January 2018 12:58
Jai Kannada
Jai Kannada
Blog single photo
December 12, 2017

ಯಾವ ಚಿತ್ರಗಳಲ್ಲೂ ಅಭಿನಯಿಸದ ಅನುಷ್ಕಾ: ಅಭಿಮಾನಿಗಳಿಗೆ ನಿರಾಶೆ 

ಟಾಲಿವುಡ್‌ನ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೊಂದು ನಿರಾಶೆಯ ಸುದ್ದಿ ಏನೆಂದರೆ ಅನುಷ್ಕಾ ಕೆಲವು ಕಾಲ ಚಿತ್ರಗಳ ನಟನೆಗೆ ಬ್ರೇಕ್ ಹಾಕಿರುವುದು. ಇದಕ್ಕೆ ಕಾರಣ ಅನುಷ್ಕಾ ಅವರನ್ನು ಬಿಡದೇ ಕಾಡುತ್ತಿರುವ ಬೆನ್ನುನೋವು. ಇದರಿಂದ ಯಾವುದೇ ಕಾರ್ಯಕ್ರಮಗಳಲ್ಲೂ ಅನುಷ್ಕಾ ಭಾಗಿಯಾಗುತ್ತಿಲ್ಲ ಮತ್ತು ಚಿತ್ರಗಳಲ್ಲಿ ಕೂಡ ಅಭಿನಯಿಸುವುದಕ್ಕೆ ವಿರಾಮ  ಘೋಷಿಸಿದ್ದಾರೆ.

ಬೆನ್ನು ನೋವಿನಿಂದಾಗಿ ಅನುಷ್ಕಾ ಕೆಲವು ದಿನಗಳಿಂದ ಎಲ್ಲಿಯೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಇನ್ನು ನೋವು ಕಡಿಮೆ ಆಗುವರೆಗೂ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

 ಅನುಷ್ಕಾ ಸೈಜ್ ಝೀರೋ ಚಿತ್ರಕ್ಕಾಗಿ ದಿಢೀರನೇ ತೂಕ ಹೆಚ್ಚಿಸಿಕೊಂಡ ಪರಿಣಾಮವೇ ಬೆನ್ನು ನೋವು ಎಂದು ಹೇಳಲಾಗುತ್ತಿದೆ. ನ್ಯಾಚುರಲ್ ಸ್ಪಾ ಥೆರಪಿಗಾಗಿ ಅನುಷ್ಕಾ ಕೊಯಮತ್ತೂರು ಮತ್ತು ಕೇರಳಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಭಾಗಮತಿ ಸಿನಿಮಾ ಜನವರಿ 26ರಂದು ತೆರೆಕಾಣಲಿದ್ದು, ಚಿಕಿತ್ಸೆಯ ಬಳಿಕ ಚಿತ್ರದ ಪ್ರಚಾರ ಕಾರ್ಯದಲ್ಲಿ ಅನುಷ್ಕಾ ತೊಡಗಿಕೊಳ್ಳಲಿದ್ದಾರೆ.

Recent Comments

Leave Comments

footer
Top