• 15 December 2017 23:30
Jai Kannada
Jai Kannada
Blog single photo
December 07, 2017

ಏಕದಿನದ ರೀತಿಯಲ್ಲೇ ಟೆಸ್ಟ್ ಆಡುವ ಕೊಹ್ಲಿ ಹೊಸ ಮುಖ 

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಡ್ರಾಗೊಂಡ ಮೂರನೇ ಟೆಸ್ಟ್‌ನಲ್ಲಿ ತಮ್ಮ ಬ್ಯಾಟಿಂಗ್‌ನ ಹೊಸ ಮುಖವನ್ನು ಅನಾವರಣಗೊಳಿಸಿದ್ದಾರೆ.. ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಬಾರಿಸುವುದು ಏಕದಿನ ಪಂದ್ಯಕ್ಕಿಂತ ಭಿನ್ನವಲ್ಲ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಅಂತಿಮ ಪಂದ್ಯದಲ್ಲಿ ಕೊಹ್ಲಿ 25 ಬೌಂಡರಿಗಳ ನೆರವಿನೊಂದಿಗೆ 287 ಎಸೆತಗಳಲ್ಲಿ 243 ರನ್ ಗಳಿಸಿದ್ದಾರೆ.

ತಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಏಕದಿನ ಪಂದ್ಯಗಳ ರೀತಿಯಲ್ಲಿ ವೇಗವಾಗಿ ಆಡಬಹುದು ಎನ್ನುವುದನ್ನು ಹೊರಗೆಡಹಿದ್ದಾರೆ.
ವೈಯಕ್ತಿಕವಾಗಿ, ನಾನು ಚೆಂಡನ್ನು ಚೆನ್ನಾಗಿ ಹೊಡೆಯುತ್ತಿದ್ದೆ ಮತ್ತು ಏಕದಿನ ಪಂದ್ಯಗಳಲ್ಲಿ ಆಡಿದ ರೀತಿಯಲ್ಲೇ ಟೆಸ್ಟ್‌ನಲ್ಲೂ ಚೆಂಡನ್ನು ಹೊಡೆಯಬಹುದು ಎನ್ನುವುದು ಅರಿವಾಗಿದೆ. ಇದಕ್ಕೆ ಮುಂಚೆ ಟೆಸ್ಟ್‌ನಲ್ಲಿ ಹೀಗೆ ಆಡಲು ಹಿಂಜರಿಯುತ್ತಿದ್ದೆ.

ಆದರೆ ಟೆಸ್ಟ್ ಕ್ರಿಕೆಟ್‌ನಲ್ಲೂ ಕೂಡ ಆಟವನ್ನು ವೇಗವಾಗಿ ಮುಂದಕ್ಕೆ ಒಯ್ಯಬಹುದೆಂಬುದು ಅರಿವಾಗಿದೆ ಎಂದು ಕೊಹ್ಲಿ ಪಂದ್ಯದ ಬಳಿಕ ತಿಳಿಸಿದರು. 

ಇಂದಿನ ದಿನಗಳಲ್ಲಿ ಯಾವುದೇ ನಮೂನೆಯ ಆಟವೆಂಬುದಿಲ್ಲ. ನಿಮ್ಮಲ್ಲಿ ಸ್ವಯಂ ನಂಬಿಕೆಯಿದ್ದರೆ, ಯಾವುದೇ ಸ್ವರೂಪದ ಆಟದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಅವರು ಹೇಳಿದರು.
ಮೂರು ಶತಕಗಳು ಸೇರಿದಂತೆ ಎರಡು ದ್ವಿಶತಕಗಳೊಂದಿಗೆ 610 ರನ್ ಗಳಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳಿಗೆ ಪಾತ್ರರಾದರು.

Recent Comments

Leave Comments

footer
Top