• 15 December 2017 23:30
Jai Kannada
Jai Kannada
Blog single photo
December 07, 2017

ಮೈಸೂರು ರಾಜಕುಟುಂಬದ ಕುಡಿ ಆಗಮನ

ಬೆಂಗಳೂರು: ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ದೇವಿ ಬುಧವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಪೂರ್ವ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ತ್ರಿಷಿಕಾ ರಾತ್ರಿ 10.20ಕ್ಕೆ ಮಗುವಿಗೆ ಜನ್ಮ ನೀಡಿದರು. 

ಇದರಿಂದ ಅಲಮೇಲಮ್ಮನ ಶಾಪದಿಂದ ಮೈಸೂರು ವಂಶಸ್ಥರಿಗೆ ಮಕ್ಕಳಾಗುತ್ತಿಲ್ಲ ಎಂಬ ಕೊರಗು ದೂರಾಗಿದೆ.  ಕಳೆದ ವರ್ಷ ಯದುವೀರ ರಾಜ್‌ಕೋಟ್ ರಾಜಕುಟುಂಬದ ರಾಜಕುಮಾರಿ ತ್ರಿಷಿಕಾ ಕುಮಾರಿಯನ್ನು ವಿವಾಹವಾಗಿದ್ದರು.

ತ್ರಿಷಿಕಾ ದೇವಿ ಗರ್ಭವತಿಯಾಗಿದ್ದರಿಂದ ರಾಜಕುಟುಂಬದಲ್ಲಿ ಸಂತೋಷ, ಸಡಗರ ನೆಲೆಸಿತ್ತು.ಏಕೆಂದರೆ ಮೈಸೂರು ದಸರಾವನ್ನು ಈ ವರ್ಷ ಆಚರಿಸಿದ ಮೂರನೇ ಗರ್ಭಿಣಿ ಮಹಿಳೆ ಅವಳಾಗಿದ್ದಳು. ಯದುವೀರ್ ಅವರನ್ನು ರಾಣಿ ಪ್ರಮೋದಾ ದೇವಿ ದತ್ತು ತೆಗೆದುಕೊಂಡಿದ್ದರು.

Recent Comments

Leave Comments

footer
Top