ವಿಂಡೀಸ್ 108ಕ್ಕೆ ಆಲೌಟ್: ಭಾರತಕ್ಕೆ 2-0ಯಿಂದ ಸರಣಿ ಜಯ

ಭಾರತ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವೆಸ್ಟ್ ಇಂಡೀಸ್ ತಂಡವನ್ನು 108 ರನ್‌ಗಳಿಗೆ ಆಲೌಟ್  ಮಾಡುವ ಮೂಲಕ 237 ರನ್ ಅಂತರದಿಂದ ಜಯಗಳಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂ‌ಡೀಸ್ 225 ರನ್‌ಗಳಿಗೆ ಆಲೌಟ್ ಆದ ಬಳಿಕ ಭಾರತ 7 ವಿಕೆಟ್‌ಗೆ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

59 ರನ್‌ಗಳೊಂದಿಗೆ ಡೆರೆನ್ ಬ್ರೇವೊ ಸ್ವಲ್ಪ ಪ್ರತಿರೋಧ ತೋರಿದರು. ಭಾರತ ಬೌಲಿಂಗ್‌ನ ವೇಗ ಮತ್ತು ಸ್ಪಿನ್ ಎದುರಿಸಲು ತಾಂತ್ರಿಕವಾಗಿ ಸಜ್ಜಾಗಿರದ ವಿಂಡೀಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 108 ರನ್‌ಗಳಿಗೆ ಬೌಲ್ಡ್ ಆಗಿದೆ.

ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಯ ಮೂಲಕ 11ಕ್ಕೆ 3 ವಿಕೆಟ್ ಕಬಳಿಸಿದರು. ಇದು ಭಾರತಕ್ಕೆ 2-0 ಸರಣಿ ಜಯ ತಂದುಕೊಟ್ಟಿದೆಯಲ್ಲದೇ ಕ್ಯಾರಿಬಿಯನ್‌ನಲ್ಲಿ ಆಡಿದ 11 ಸರಣಿಗಳಲ್ಲಿ 1ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ.  ಇಡೀ ತಂಡಕ್ಕೆ ಗೆಲುವಿನ ಕ್ರೆಡಿಟ್ ಸಲ್ಲುತ್ತದೆ. ಜಮೈಕಾದಲ್ಲಿ ನಾವು ಏನು ತಪ್ಪು ಮಾಡಿದ್ದೇವೆಂದು ಗುರುತಿಸಿ ಇಲ್ಲಿ ಅವುಗಳನ್ನು ಸರಿಪಡಿಸಿಕೊಂಡಿದ್ದಾಗಿ ಕೊಹ್ಲಿ ಹೇಳಿದರು.



Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery