ನನ್ನ ತಂದೆಯ ಹತ್ಯೆಯಿಂದ ಕನಸುಗಳು ನುಚ್ಚುನೂರಾದವು: ವಿಸ್ಮಯಾ

ಕಣ್ಣೂರು: `ನನ್ನ ತಂದೆಯನ್ನು ಏಕೆ ಕೊಂದಿರಿ. ನನ್ನ ಕನಸುಗಳನ್ನು ಈಡೇರಿಸಲು ನನ್ನ ತಂದೆ ಬಯಸಿದ್ದರು. ಆದರೆ ನನ್ನ ತಂದೆಯ ಹತ್ಯೆಯಿಂದ ನನ್ನ ಕನಸುಗಳು ನುಚ್ಚುನೂರಾದವು` ಎಂದು ಹತ್ಯೆಗೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತರ 12 ವರ್ಷ ವಯಸ್ಸಿನ ಪುತ್ರಿ ಭಾವುಕಳಾಗಿ ಕೇಳಿದ ಪ್ರಶ್ನೆಯಿದು.

ಈ ವಿಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ವಿಸ್ಮಯ ಎಂಬ ಹೆಸರಿನ ಈ ಬಾಲಕಿ ಫಲಕಗಳ ಮೂಲಕ ತನ್ನ ಪ್ರಭಾವಶಾಲಿ ಸಂದೇಶವನ್ನು ಸಾರಿದ್ದಾಳೆ. ದೆಹಲಿ ವಿದ್ಯಾರ್ಥಿನಿ ಗುರ್‌ಮೆಹರ್ ಕೌರ್ ಪೋಸ್ಟ್‌ಗಳಿಂದ ಅವಳು ಬಹುಶಃ ಸ್ಫೂರ್ತಿ ಪಡೆದಿರಬಹುದು.

ವಿಸ್ಮಯಾ ತಂದೆ  52 ವರ್ಷ ವಯಸ್ಸಿನ ಸಂತೋಷ್ ಕುಮಾರ್ ಅವರನ್ನು ಕಣ್ಣೂರಿನ ಅವರ ಮನೆಯಲ್ಲಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಕೇವಲ ಒಂದು ರಾತ್ರಿಯಲ್ಲಿ ನನ್ನ ಕನಸುಗಳೆಲ್ಲಾ ಕೊಚ್ಚಿಹೋದವು. ನಾನು ಈ ಗ್ರಾಮಕ್ಕೆ ಸೇವೆ ಸಲ್ಲಿಸಲು ಪೊಲೀಸ್ ಅಧಿಕಾರಿಯಾಗಲು ಬಯಸಿದ್ದೆ ಎಂದು ಫಲಕದಲ್ಲಿ 8ನೇ ತರಗತಿ ವಿದ್ಯಾರ್ಥಿ ತನ್ನ ಸಂದೇಶವನ್ನು ಹೇಳಿದ್ದಾಳೆ.

ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದೇ ದೊಡ್ಡ ತಪ್ಪಾಯಿತೇ? ನನ್ನ ಭವಿಷ್ಯ ಬರೀ ಕತ್ತಲಿನಲ್ಲಿ ಮುಳುಗಿದೆ. ಅವರು ನನ್ನ ತಂದೆಯನ್ನು ಮಾತ್ರ ಕೊಲ್ಲಲಿಲ್ಲ, ಆದರೆ ನನ್ನ ಕನಸುಗಳನ್ನು ಮತ್ತು ಭವಿಷ್ಯವನ್ನು ಕೊಂದರು. ನಾನು ಈಗ ಬರೀ ಕತ್ತಲೆಯನ್ನು, ಸಂಪೂರ್ಣ ಕತ್ತಲೆಯನ್ನು ಕಾಣುತ್ತಿದ್ದೇನೆ. ಅವರು ತಂದೆಯನ್ನು ಏಕೆ ಕೊಂದರೆಂದು ನನಗಿನ್ನೂ ಉತ್ತರ ಸಿಕ್ಕಿಲ್ಲ ಎಂದು ಬಾಲಕಿ ಭಾವುಕಳಾಗಿ ತಿಳಿಸಿದ್ದಾಳೆ.
ತಂದೆಯ ಹತ್ಯೆಯ ಬಳಿಕ, ವಿಸ್ಮಯಾ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ತೀವ್ರ ಭಾವುಕತೆಯನ್ನು ಮೂಡಿಸಿದೆ. ಹಣಕಾಸಿನ ನೆರವಿನ ಪ್ರಸ್ತಾಪಗಳು ಹರಿದುಬಂದಿವೆ. ಕಣ್ಣೂರು ಕೇರಳದಲ್ಲಿ ರಾಜಕೀಯ ಹಿಂಸಾಚಾರದ ಕೇಂದ್ರಬಿಂದುವಾಗಿದ್ದು, ಆರ್‌ಎಸ್ಸೆಸ್ ಮತ್ತು ಎಡಪಕ್ಷಗಳ ಅನೇಕ ಮಂದಿ ಕಾರ್ಯಕರ್ತರು ಹತರಾಗಿದ್ದಾರೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery